ಇಂದು ಕೆ.ಆರ್ ಎಸ್ ಗೆ ಬಾಗೀನ ಅರ್ಪಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ..

ಮಂಡ್ಯ,ಆ,29,2019(www.justkannada.in) ಕೆ.ಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆ ಇಂದು ಸಿಎಂ ಬಿಎಸ್ ಯಡಿಯೂರಪ್ಪ ಕೆ.ಆರ್ ಎಸ್ ಗೆ ಬಾಗೀನ ಅರ್ಪಿಸಲಿದ್ದಾರೆ.

ಮೊದಲು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲಿರುವ ಸಿಎಂ ಬಿಎಸ್ ಯಡಿಯೂರಪ್ಪ ನಂತರ ಕೆಆರ್ ಎಸ್ ಗೆ ತೆರಳಿ ಬಾಗೀನ ಅರ್ಪಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ 11.30ಕ್ಕೆ ಈ ಕಾರ್ಯಕ್ರಮ ನೆರವೇರಲಿದೆ ಎನ್ನಲಾಗುತ್ತಿದೆ.

ಪ್ರತಿವರ್ಷ ಕಾವೇರಿ ತುಂಬುತ್ತಿದ್ದಂತೆ ರಾಜ್ಯದ ಮುಖ್ಯಮಂತ್ರಿಯಾದವರು ಬಂದು ಬಾಗಿನ ಅರ್ಪಿಸುವ ಸಂಪ್ರದಾಯದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಕೆಆರ್ ಎಸ್ ಡ್ಯಾಂಗೆ ತೆರಳಿ ಕಾವೇರಿ ನದಿಗೆ ಬಾಗಿನ ಅರ್ಪಿಸಲಿದ್ದಾರೆ. ಕೆ.ಆರ್ ಎಸ್ ಸಿಎಂ ಆಗಮಿಸುವ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Key words: CM- BS Yeddyurappa-krs-dam-fullfill-presenting -worship