Friday, October 16, 2026

Dasara Wishes

Happy Dasara
Home Front Page ಇಂದು ಬೆಳ್ಳಂಬೆಳಗ್ಗೆ ವಿಶಾಖಪಟ್ಟಣದಲ್ಲಿ ಭೂಕಂಪನ

ಇಂದು ಬೆಳ್ಳಂಬೆಳಗ್ಗೆ ವಿಶಾಖಪಟ್ಟಣದಲ್ಲಿ ಭೂಕಂಪನ

ವಿಶಾಖಪಟ್ಟಣ, ನವೆಂಬರ್ 14, 2021 (www.justkannada.in): ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದೆ.

ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ. ವಿಶಾಖಪಟ್ಟಣದ ವೈಜಾಗ್ ನ ಅನೇಕ ಭಾಗಗಳಲ್ಲಿ ಬೆಳಿಗ್ಗೆ 7.13 ರ ಸುಮಾರಿಗೆ ಭೂ ಕಂಪನದ ಅನುಭವವಾಗಿದೆ.

ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಬಂದು ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಯಲ್ಲಿ ಜಮಾಯಿಸಿದರು. ಬಾಲಯಶಾಸ್ತ್ರಿ ಲೇಔಟ್, ಸೀತಮ್ಮಧಾರಾ, ಅಲ್ಲಿಪುರಂ ಬಂಗಾರಮ್ಮ ಮೆಟ್ಟಾ ಮತ್ತು ವೇಪಗುಂಟಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಕಂಪಸಂಭವಿಸಿದೆ.

ಪೆಂಡೂರ್ತಿ ಮತ್ತು ಸಿಂಹಾಚಲಂನಲ್ಲಿಯೂ ಭೂಕಂಪಸಂಭವಿಸಿದೆ. ಜನರು ಭಯಭೀತರಾಗಿದ್ದರು ಮತ್ತು ತಮ್ಮ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.