ಮೈಸೂರು,ಜುಲೈ,28,2025 (www.justkannada.in): ಮೈಸೂರು ಅಭಿವೃದ್ದಿ ಪ್ರಾಧಿಕಾರವು ಅಭಿವೃದ್ದಿಪಡಿಸಿರುವ ಪ್ರತಿಷ್ಠಿತ ಬಡಾವಣೆಗಳಲ್ಲಿ ಮೂಲೆ ಮತ್ತು ಮಧ್ಯಂತರ ನಿವೇಶನಗಳ ಇ-ಹರಾಜು ಪ್ರಕ್ರಿಯೆ ಕೈಗೊಂಡಿದ್ದು ಹರಾಜಿನಲ್ಲಿ ಪಾಲ್ಗೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
31.07.2025 ರ ಸಂಜೆ 6.00 ಗಂಟೆಯ ನಂತರ ಇ-ಹರಾಜನ್ನು ಆರಂಭಿಸಲಿದೆ. ಕ್ರ.ಸಂ.1 ರಿಂದ 50 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 12.08.2025 ರ ಭಾರತೀಯ ಕಾಲಮಾನ ಸಂಜೆ 5.00 ಗಂಟೆಯವರೆಗೆ ಮತ್ತು ಇ-ಹರಾಜು ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 16.08.2025 ರ ಮಧ್ಯಾಹ್ನ 11.00 ಗಂಟೆಯಿಂದ ನೇರ ಬಿಡ್ಡಿಂಗ್ ಅಂತಿಮಗೊಳ್ಳುವ ದಿನಾಂಕ: 18.08.2025 ರ ಸಂಜೆ 4.00 ಗಂಟೆಯವರೆಗೆ (ಡೆಲ್ವಾ ಟೈಮ್ 5.00 ನಿಮಿಷ) ಆಗಿರುತ್ತದೆ.
ಕ್ರ.ಸಂ.51 ರಿಂದ 100 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 12.08.2025 ರ ಸಂಜೆ 5.00 ಗಂಟೆಯವರೆಗೆ ಮತ್ತು ಇ-ಹರಾಜು ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 19.08.2025 ರ ಮಧ್ಯಾಹ್ನ 11.00 ಗಂಟೆಯಿಂದ ನೇರ ಬಿಡ್ಡಿಂಗ್ ಅಂತಿಮಗೊಳ್ಳುವ ದಿನಾಂಕ: 20.08.2025 ರ ಸಂಜೆ 4.00 ಗಂಟೆಯವರೆಗೆ (ಡೆಲ್ವಾ ಟೈಮ್ 5.00 ನಿಮಿಷ) ಆಗಿರುತ್ತದೆ
ಕ್ರ.ಸಂ.101 ರಿಂದ 150 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 12.08.2025 ರ ಸಂಜೆ 5.00 ಗಂಟೆಯವರೆಗೆ ಮತ್ತು ಇ-ಹರಾಜು ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 21.08.2025 ರ ಮಧ್ಯಾಹ್ನ 11.00 ಗಂಟೆಯಿಂದ ನೇರ ಬಿಡ್ಡಿಂಗ್ ಅಂತಿಮಗೊಳ್ಳುವ ದಿನಾಂಕ: 22.08.2025 ರ ಸಂಜೆ 4.00 ಗಂಟೆಯವರೆಗೆ (ಡೆಲ್ವಾ ಟೈಮ್ 5.00 ನಿಮಿಷ).
ಕ್ರಸಂ.151 ರಿಂದ 200 ರವರೆಗೆ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 12.08.2025 ರ ಸಂಜೆ 5.00 ಗಂಟೆಯವರೆಗೆ ಮತ್ತು ಇ-ಹರಾಜು ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 25.08.2025 ರ ಮಧ್ಯಾಹ್ನ 11.00 ಗಂಟೆಯಿಂದ ನೇರ ಬಿಡ್ಡಿಂಗ್ ಅಂತಿಮಗೊಳ್ಳುವ ದಿನಾಂಕ: 26.08.2025 ರ ಸಂಜೆ 4.00 ಗಂಟೆಯವರೆಗೆ (ಡೆಲ್ಟಾ ಟೈಮ್ 5.00 ನಿಮಿಷ) ಆಗಿರುತ್ತದೆ.
ಇ-ಹರಾಜಿನ ಷರತ್ತು ಮತ್ತು ನಿಯಮ ನಿಬಂಧನೆಗಳು ಹೀಗಿವೆ
1) ಹರಾಜಿನಲ್ಲಿ ಪಾಲ್ಗೊಳ್ಳುವವರು ಭಾರತೀಯ ಪ್ರಜೆಯಾಗಿರಬೇಕು, ಭಾರತ ದೇಶದಲ್ಲಿ ನೋಂದಣಿಯಾಗಿರುವ ಪಾಲುದಾರ ಸಂಸ್ಥೆ/ಲಿಮಿಟೆಡ್ ಕಂಪೆನಿಗಳು/ಟ್ರಸ್ಟ್‌ಗಳು ಭಾಗವಹಿಸಬಹುದಾಗಿದೆ.
2) ಇ-ಹರಾಜಿನಲ್ಲಿ ಭಾಗವಹಿಸಲಿಚ್ಚಿಸುವವರು ಇ-ಹರಾಜಿಗೆ ಸಂಬಂಧಿಸಿದ ಮಾಹಿತಿಯನ್ನು https://kppp.karnataka.gov.in ವೆಬ್‌ಸೈಟ್ ನಲ್ಲಿ ಲಾಗಿನ್ ಆಗಿ ಮುಖಪುಟದ ಡೌನ್ ಲೋಡ್ ನಲ್ಲಿ ಟೆಂಡರ್ದಾರರಿಗೆ ಬಳಕೆದಾರರ ಕೈಪಿಡಿಗಳು ಇಲ್ಲಿ New e-Auction Bidding user manual ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್- 080-46010000 ಮತ್ತು 080-68948777 ಗೆ ಸಂಪರ್ಕಿಸಬಹುದು.
3) ಹರಾಜಿನಲ್ಲಿ ಪಾಲ್ಗೊಳ್ಳುವವರು https://kppp.karnataka.gov.in ವೆಬ್ ಸೈಟ್ ನಿಂದ ನಿಗಧಿತ ಮಾದರಿ ಸಹಿಯ ನಮೂನೆ (ಇದರಲ್ಲಿ ಅರ್ಜಿದಾರರ ಹೆಸರು ಮತ್ತು ತಂದೆಯ ಹೆಸರನ್ನು ಕನ್ನಡ ಹಾಗೂ ಅಂಗ್ಲ ಭಾಷೆಯಲ್ಲಿ ನಮೂದಿಸುವುದು) ಹಾಗೂ ಸಂಪರ್ಕದ ಮಾಹಿತಿಯ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು, ವಿವರಗಳನ್ನು ಭರ್ತಿ ಮಾಡಿ, ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕಾಗಿರುತ್ತದೆ.
4) ಇ-ಹರಾಜಿನ ಮೂಲಕ ನಿವೇಶನವನ್ನು ಜಂಟಿಯಾಗಿ ಖರೀದಿಸುವವರು ಜಂಟಿಯಾಗಿ ದಾಖಲೆಗಳನ್ನು ಇ-ಹರಾಜಿನ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕು.
5) ಹರಾಜಿಗೊಳಪಡಿಸಿರುವ ನಿವೇಶನಗಳು ಎಲ್ಲಿ ಹೇಗೆ ಇವೆಯೋ ಅದೇ ಸ್ಥಿತಿಯಲ್ಲಿ ಯಶಸ್ವಿ ಬಿಡ್ಡುದಾರರಿಗೆ ಹಂಚಿಕೆ ಮಾಡಲಾಗುವುದು, ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ನಿವೇಶನದ ಸ್ಥಳ, ರಸ್ತೆಯ ಅಗಲ ಮುಂತಾದವುಗಳನ್ನು ಖುದ್ದಾಗಿ ಪರಿಶೀಲಿಸಿಕೊಂಡು ಹರಾಜಿನಲ್ಲಿ ಭಾಗವಹಿಸುವುದು ಎಂದು ಹಲವು ನಿಬಂದನೆಗಳನ್ನ ವಿಧಿಸಲಾಗಿದೆ.
Key words: E-auction, sites, Muda, Application, invited