ಕಮಲ್ ಹಾಸನ್ ಭೇಟಿ ಮಾಡಿದ ಡ್ವೇನ್ ಬ್ರಾವೋ

ಚೆನ್ನೈ, ಡಿಸೆಂಬರ್ 12, 2019 (www.justkannada.in): ವೆಸ್ಟ್ ಇಂಡೀಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಚೆನ್ನೈನಲ್ಲಿ ಭಾರತದ ಚಿತ್ರರಂಗದ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರನ್ನು ಭೇಟಿಯಾದರು.

ಡ್ವೇನ್ ಬ್ರಾವೋ ಅವರು ಕಮಲ್ ಹಾಸನ್ ಅವರಿಗೆ ವೈಯಕ್ತಿಕವಾಗಿ ಸಹಿ ಮಾಡಿದ ಟಿ-ಶರ್ಟ್‌ನ್ನು ನೀಡಿದರು ಮತ್ತು ಇಬ್ಬರು ಸೂಪರ್‌ಸ್ಟಾರ್‌ಗಳು ಫೋಟೊಗೆ ಪೋಸ್ ನೀಡಿದರು.

ಪ್ರಶಸ್ತಿ ಸಮಾರಂಭದ ಹೊರತಾಗಿ ಡ್ವೇನ್ ಬ್ರಾವೋ ಚೆನ್ನೈಗೆ ಭೇಟಿ ನೀಡಿದ್ದರು. ಈ ವಾರದ ಆರಂಭದಲ್ಲಿ ಅವರಿಗೆ ‘ಗ್ಲೋಬಲ್ ಐಕಾನ್ ಆಫ್ ಇನ್ಫೇರೇಶನ್’ ಶೀರ್ಷಿಕೆಯೊಂದಿಗೆ ಸನ್ಮಾನಿಸಲಾಯಿತು.