ಯುವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಯುವಿಗೆ ಇಂದು 38ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ಟೀಂ ಇಂಡಿಯಾ ಪಾಲಿಗೆ ದೊರೆತ ಪರಿಪೂರ್ಣ ಹಾಗೂ ಪರಿಪಕ್ವ ಆಲ್​ರೌಂಡರ್​​ಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಕಂಡುಬರುವ ಹೆಸರು ಯುವರಾಜ್ ಸಿಂಗ್​. ಯಾವುದೇ ಮೈದಾನವಾದರೂ ನಿರ್ಭೀತಿಯಿಂದ ಬ್ಯಾಟ್ ಬೀಸಬಲ್ಲ ಯುವಿ, ಫೀಲ್ಡಿಂಗ್​​ನಲ್ಲಿ ಟೀಂ ಇಂಡಿಯಾದ ಹಲವು ಹಾಲಿ ಆಟಗಾರರಿಗೆ ಮಾದರಿ.

2019ರ ವಿಶ್ವಕಪ್ ಆಡುವ ಮಹದಾಸೆ ಹೊಂದಿದ್ದ ‘ಪಂಜಾಬ್​​ ಕಾ ಪುತ್ತರ್’​​, ಅದು ಈಡೇರದೆ ಎಲ್ಲ ಮಾದರಿಗೂ ವಿದಾಯ ಘೋಷಿಸಿದ್ದರು.