Thursday, September 24, 2026

BDA Apartments

ಡಿ.12ರಿಂದ ಮೂರು ದಿನಗಳ ಕಾಲ ‘ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ BDA JK_Adv BDA Adv
Home Cinema ಡ್ರಗ್ಸ್ ಮಾಫಿಯಾ ವಿಚಾರ: ನಾನೇನು ತಪ್ಪು ಮಾಡಿಲ್ಲ- ನಟ ಲೂಸ್ ಮಾದ ಯೋಗಿ

ಡ್ರಗ್ಸ್ ಮಾಫಿಯಾ ವಿಚಾರ: ನಾನೇನು ತಪ್ಪು ಮಾಡಿಲ್ಲ- ನಟ ಲೂಸ್ ಮಾದ ಯೋಗಿ

ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ಡ್ರಗ್ಸ್ ಸಂಬಂಧಿಸಿದಂತೆ ನನ್ನ ಗಮನಕ್ಕೆ ಬಂದಿಲ್ಲ. ನಾನು ಏನು ತಪ್ಪು ಮಾಡಿಲ್ಲ. ಯಾವುದೇ ಪಾರ್ಟಿಗೆ ಹೋಗಿಲ್ಲ. ಹೀಗಾಗಿ, ನನಗೆ ಯಾವುದೇ ಭಯವಿಲ್ಲ ಎಂದು ನಟ ಲೂಸ್ ಮಾದ ಯೋಗಿ ಸ್ಪಷ್ಟಪಡಿಸಿದ್ದಾರೆ.jk-logo-justkannada-logo

ಡ್ರಗ್ಸ್ ಮಾಫಿಯಾ ಸಂಬಂಧ ಐಎಸ್ ಡಿ ನೋಟಿಸ್ ನೀಡಿರುವ ಹಿನ್ನೆಲೆ ಈ ಕುರಿತು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ನಟ ಲೂಸ್ ಮಾದ ಯೋಗಿ, ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಐಎಸ್ ಡಿ ಅವರು ಶನಿವಾರ ನೋಟಿಸ್ ನೀಡಿದ ಹಿನ್ನೆಲೆ ವಿಚಾರಣೆಗೆ ಹಾಜರಾಗಿ ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಬಂದಿದ್ದೇನೆ.

ನನಗೂ ರಾಗಿಣಿಗೂ ಯಾವುದೇ ಸಂಬಂಧ ಇಲ್ಲ. ನಟಿ ರಾಗಿಣಿ ಸಿನಿಮಾ ಬಳಿಕ  ಯಾವುದೇ ಸಂಬಂಧವಿಲ್ಲ. ಅಧಿಕಾರಿಗಳು ವಿಚಾರಣೆಯಲ್ಲಿ ರಾಗಿಣಿಯ ಬಗ್ಗೆ ಪ್ರಶ್ನೆ ಮಾಡಿಲ್ಲ. ನನಗೂ ಕುಟುಂಬವಿದೆ ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬವುದು ಬೇಡ. 2011-12 ಅಷ್ಟೇ ಆದಾದ ಮೇಲೆ ನಾನು ಯಾವುದೇ ಪಾರ್ಟಿಗಳಿಗೆ ಹೋಗಿಲ್ಲ. ಕುಡಿಯುವುದು, ಸಿಗರೇಟ್ ಸೇದುತ್ತೇನೆ ಡ್ರಗ್ಸ್ ಅಭ್ಯಾಸವಿಲ್ಲ ಎಂದು ಹೇಳಿದ್ದಾರೆ.

Drugs-Mafia-Not-Wrong-no-fear-Actor-Luce mada yogi

ನನ್ನ ಪಾಸ್ ಪೋರ್ಟ್ ಅವಧಿ 2018ಕ್ಕೆ ಮುಗಿದು ಹೋಗಿದ್ದು, ನಾನು ಯಾವುದೇ ವಿದೇಶಕ್ಕೆ ಹೋಗಿಲ್ಲ. ಹೀಗಾಗಿ, ನನಗೆ ಯಾವುದೇ ಭಯವಿಲ್ಲ. ನನ್ನ ಮೊಬೈಲ್ ಅನ್ನು ಅವರು ಪಡೆದುಕೊಂಡಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.

key words : Drugs-Mafia-Not-Wrong-no-fear-Actor-Luce mada yogi