Saturday, November 7, 2026

Dasara Wishes

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಒಲಿದ ಕೆಪಿಸಿಸಿ ಅಧ್ಯಕ್ಷ ಪಟ್ಟ… DasraWishes_JK DasraWishes JK
Happy Dasara
Home Cinema ಸೋಮವಾರ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ನಟಿ ರಾಗಿಣಿ…..

ಸೋಮವಾರ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗಲಿರುವ ನಟಿ ರಾಗಿಣಿ…..

ಬೆಂಗಳೂರು,ಸೆಪ್ಟಂಬರ್,3,2020(www.justkannada.in): ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ಗೆ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ನಟಿ ರಾಗಿಣಿ ತಿಳಿಸಿದ್ದಾರೆ.jk-logo-justkannada-logo

ಡ್ರಗ್ಸ್​ ಪ್ರಕರಣ ಕುರಿತು  ವಿಚಾರಣೆ ನಡೆಸುವುದಕ್ಕೆ ಸಿಸಿಬಿ ಪೊಲೀಸರು, ಸ್ಯಾಂಡಲ್​ವುಡ್​ ನಟಿ ರಾಗಿಣಿಗೆ  ನೋಟೀಸ್  ನೀಡಿದ್ದರು. ಆದರೆ ನಟಿ ರಾಗಿಣಿ ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ನಟಿ ರಾಗಿಣಿ, ನನಗೆ ವಾಟ್ಸಪ್ ನಲ್ಲಿ ಈ ಬಗ್ಗೆ ಮಾಹಿತಿ ಬಂದಿದೆ.  ನಾನು ಇಂದು ಸಿಸಿಬಿ ಪೊಲೀಸರೆದುರು ಹಾಜರಾಗುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ನಮ್ಮ ಕಾನೂನಿನ ಮೇಲೆ ಗೌರವ ಇರುವುದರಿಂದ, ನನ್ನ ಪರವಾಗಿ ನನ್ನ ವಕೀಲರು ಹಾಜರಾಗಿದ್ದಾರೆ. ನಾನು ಯಾಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ ಎಂಬುದನ್ನು ಪೊಲೀಸರಿಗೆ ಮನವಿ ಮಾಡಿಕೊಟ್ಟಿದ್ದಾರೆ. ನಾನು ಸೋಮವಾರ ವಿಚಾರಣೆಗೆ ಹಾಜರಾಗುತ್ತೇನೆ  ಎಂದು ಹೇಳಿದ್ದಾರೆ.

ಇನ್ನು ನನಗೂ ರವಿಶಂಕರ್ ಗೂ ಸಂಬಂಧವಿಲ್ಲ ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಈಗಾಗಲೇ ನಟಿ ರಾಗಿಣಿ  ಸ್ಪಷ್ಟಪಡಿಸಿದ್ದಾರೆ. ಪೊಲೀಸರೆದುರು ಹಾಜರಾಗುವುದಕ್ಕೆ ಒಂದಿಷ್ಟು ಕಾಲಮಿತಿಯನ್ನು ಪಡೆದುಕೊಂಡಿರುವ ಅವರು, ಮುಂದಿನ ಸೋಮವಾರದಂದು ತಪ್ಪದೇ ಹಾಜರಾಗುವುದಾಗಿ ಟ್ವೀಟ್​ ಮೂಲಕ ತಿಳಿಸಿದ್ದಾರೆ .

Key words: drugs-scam-Actress- Ragini – CCB –investigation-Monday.