Monday, September 21, 2026

BDA Apartments

ಡ್ರಗ್ಸ್ ಮಾರಾಟಕ್ಕೆ ಯತ್ನ, ಮೂವರು ಆರೋಪಿಗಳ ಬಂಧನ…! BDA JK_Adv BDA Adv
Home Crime ಡ್ರಗ್ಸ್ ಮಾರಾಟಕ್ಕೆ ಯತ್ನ, ಮೂವರು ಆರೋಪಿಗಳ ಬಂಧನ…!

ಡ್ರಗ್ಸ್ ಮಾರಾಟಕ್ಕೆ ಯತ್ನ, ಮೂವರು ಆರೋಪಿಗಳ ಬಂಧನ…!

ಬೆಂಗಳೂರು,ಡಿಸೆಂಬರ್,24,2020(www.justkannada.in) : ಕ್ರಿಸ್ ಮಸ್ ಹಬ್ಬ ಹಾಗೂ ಹೊಸ ವರ್ಷದ ಆಚರಣೆಯಲ್ಲಿ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತ್ತಿದ್ದ ನೈಜೀರಿಯನ್ ಡ್ರಗ್ ಪೆಡ್ಲರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.Teachers,solve,problems,Government,bound,Minister,R.Ashok

ಉಡೇಉಜಾ(33), ಪ್ರಸೂನ್(27), ಆನಂದ್ ಚಂದ್ರನ್(27) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರ ಪೈಕಿ ಉಡೇಉಜಾ ನೈಜೀರಿಯನ್, ಪ್ರಸೂನ್ ಕೇರಳದ ಕಾಸರಗೋಡು ಹಾಗೂ ಆನಂದ್ ಕೇರಳದ ಕಣ್ಣೂರಿನವನು ಎಂದು ತಿಳಿದು ಬಂದಿದೆ.

ಡ್ರಗ್ಸ್ ಪೆಡ್ಲರ್ ಗಳ ಬಂಧನವಾಗುತ್ತಿದ್ದರೂ ನಗರದಲ್ಲಿ ಡ್ರಗ್ಸ್ ಮಾರಾಟ ನಿಲ್ಲುತ್ತಿಲ್ಲ. ಹೀಗಾಗಿ, ನಿರಂತರವಾಗಿ ಡ್ರಗ್ಸ್ ಜಾಲದ ಹಿಂದೆ ಸಿಸಿಬಿ ಪೊಲೀಸರು ಬಿದ್ದಿದ್ದಾರೆ. ಸಾಫ್ಟ್ ವೇರ್ ಟೆಕ್ಕಿಗಳು ಹಾಗೂ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಖದೀಮರು ತಂಡ ಪ್ಲಾನ್ ಮಾಡಿಕೊಂಡಿತ್ತು.

Drugs-Sale-Three-Arrest-accused ...!

ಖಚಿತ ಮಾಹಿತಿ ಮೇರೆಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ 5 ಲಕ್ಷ ರೂ. ಬೆಲೆ ಬಾಳುವ 100 ಎಂಡಿಎಂಎ ಟ್ಯಾಬ್ಲೆಟ್, ಒಂದು ಬೈಕ್, ಒಂದು ಕಾರು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

key words : Drugs-Sale-Three-Arrest-accused …!