ಡೆಲಿವರಿ ಬಾಯ್ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಡ್ರಗ್ಸ್ ಪೆಡ್ಲರ್ ಬಂಧನ: 4 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ.

ಬೆಂಗಳೂರು,ಡಿಸೆಂಬರ್,17,2022(www.justkannada.in): ಡೆಲಿವರಿ ಬಾಯ್ ಸೋಗಿನಲ್ಲಿ ಡ್ರಗ್ಸ್ ಮಾರುತ್ತಿದ್ದ ಡ್ರಗ್ಸ್ ಪೆಡ್ಲರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಡ್ರಗ್ಸ್  ಪೆಡ್ಲರ್ ಅಭಿಜಿತ್ ಬಂಧಿತ ಆರೋಪಿ. ಬಂಧಿತನಿಂಧ 4 ಲಕ್ಷ  ಮೌಲ್ಯದ 3 ಕೆಜಿ  ಗಾಂಜಾ, ಎಸ್ ಎಸ್ ಡಿ ಮಾತ್ರೆ ವಶಕ್ಕೆ ಪಡೆಯಲಾಗಿದೆ. ಅಭಿಜತ್  ಡೆಲವರಿ ಬಾಯ್ ಸೋಗಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಗ್ರಾಹಕರ ಲೊಕೇಷನ್ ಪಡೆದು ಡ್ರಗ್‍ ಮಾರಾಟ  ಮಾಡುತ್ತಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ  ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ. ಈ ಕುರಿತು ವೈಟ್ ಫಿಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  drug peddler – arrested-ccb