ಸಚಿವ ಸಂಪುಟ ವಿಸ್ತರಣೆ ಯಾರಿಗೂ ಬೇಕಿಲ್ಲ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಕಲ್ಬುರ್ಗಿ,ಡಿಸೆಂಬರ್,17,2022(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ನಾಲ್ಕೈದು ತಿಂಗಳಲ್ಲಿ ನಡೆಯುವ ಸಾಧ್ಯತೆ ಇದ್ದು ಈ  ಮಧ್ಯೆ ಸಿಎಂ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಟಾಂಗ್ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಸಂಫುಟ ವಿಸ್ತರಣೆ ಯಾರಿಗೂ ಬೇಕಿಲ್ಲ. ನಾನು ಸಂತೋಷದಿಂದ ಅಧೀವೇಶನದಲ್ಲಿ ಭಾಗಿಯಾಗುತ್ತೇನೆ. ನಾನು ಮಂತ್ರಿ ಸ್ಥಾನ ಕೇಳಿಲ್ಲ.  ಮಂತ್ರಿ ಮಾಡಿಲ್ಲ ಅಂತಾ ಮುನಿಸಿಕೊಂಡು ಕೂರೋದು ಶೋಭೆ ತರಲ್ಲ. ನನ್ನ ಅಸ್ತಿತ್ವದಿಂದಲೇ ಐದು ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಸಿಎಂ ಬದಲಾವಣೆ  ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.

ಹಾಗೆಯೇ ನಾವು ಮನೆಯಲ್ಲಿ ಕೂತರೂ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ‍್ಧರಾಮಯ್ಯಗೆ ತಿರುಗೇಟು ನೀಡಿದ ಶಾಸಕ ಯತ್ನಾಳ್,  ಮಾಜಿ ಸಿಎಂ ಸಿದ್ಧರಾಮಯ್ಯ ಮನೆಯಲ್ಲಿ ಕೂರೋದು ಗ್ಯಾರಂಟಿ. ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಯಾರು ಅಂತಾನೆ ಗೊತ್ತಿಲ್ಲ ಹಾಗಾಗಿ ಸಿದ್ಧರಾಮಯ್ಯ ಹತಾಶೆಯಿಂದ ಹೇಳಿಕೆ ನೀಡುತ್ತಿದ್ದಾರೆ ಎಂದರು.

Key words: No one –wants- cabinet expansion-MLA- Basan Gowda Patil Yatnal.