ಐಡಿಎ ಮೈಸೂರು ಶಾಖೆಗೆ ಡಾ.ಆರ್.ಜಿ.ರಘು ಅಧ್ಯಕ್ಷ ನೇಮಕ

ಮೈಸೂರು,ಡಿಸೆಂಬರ್,26,2025 (www.justkannada.in): ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಐಡಿಎ) ಮೈಸೂರು ಶಾಖೆಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2026ನೇ ಸಾಲಿನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಅಧ್ಯಕ್ಷರಾಗಿ ಡಾ. ಆರ್.ಜಿ.ರಘು, ಕಾರ್ಯದರ್ಶಿಯಾಗಿ ಡಾ.ಟಿ.ಕೆ.ಸಂದೀಪ್, ಖಜಾಂಚಿಯಾಗಿ ಡಾ. ಎನ್.ರಘುನಾಥ್, ಉಪಾಧ್ಯಕ್ಷರಾಗಿ ಡಾ.ಅಬ್ರಹಾಂ ಥಾಮಸ್, ಡಾ. ಪ್ರತಾಪ್‌ಶೆಟ್ಟಿ ಮತ್ತು ಡಾ. ಸಿ.ಕೆ.ಸೆಂದಿಲ್ ನೇಮಕಗೊಂಡಿದ್ದಾರೆ.

ಸಂಯುಕ್ತ ಕಾರ್ಯದರ್ಶಿ- ಡಾ.ಎಚ್.ಎಸ್.ಚರಣ್ ಬಾಬು, ಸಹಾಯಕ ಕಾರ್ಯದರ್ಶಿ- ಡಾ.ನಾಗಶ್ರೀ, ಸಿಡಿಎಚ್ ಸಂಚಾಲಕ- ಡಾ.ಎಚ್.ಸಿ.ರವಿಕಿರಣ್, ಸಿಡಿಇ ಸಂಚಾಲಕ-ಡಾ.ಎಚ್.ಎಲ್.ಮುತ್ತುರಾಜ್, ಸಂಪಾದಕಿ-ಡಾ.ಎಸ್.ಮೀನಾಕ್ಷಿ, ರಾಜ್ಯ ಶಾಖಾ ಪ್ರತಿನಿಧಿಗಳಾಗಿ ಡಾ.ಬಿ.ನಂದಲಾಲ್ ಮತ್ತು ಡಾ.ಕೆ.ಪಿ.ಮಹೇಶ್ ನೇಮಕಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ.ಸತ್ಯಪ್ರಕಾಶ್, ಡಾ.ಪ್ರಸನ್ನ ದೇಶಪಾಂಡೆ, ಡಾ.ಎಸ್.ಪಿ.ಪೂರ್ಣಿಮಾ, ಡಾ.ನವೀನ್ ಕುಮಾರ್, ಡಾ.ಎ.ಬಿ.ಶುಭಾ, ಡಾ.ಸಿ.ಹರೀಶ್, ಡಾ. ವಿ.ಜಿ.ಕೀರ್ತಿ, ಡಾ. ಸನತ್ ಹೆಗಡೆ, ಡಾ.ಎಚ್.ಸಿ.ರವಿ, ಡಾ. ಕೆ.ಪಿ.ಮಹೇಶ್, ಡಾ.ಸಿ.ಅರುಣ್ ಕುಮಾರ್ ಮತ್ತು ಡಾ.ಪಿ.ಎಸ್.ಪ್ರವೀಣ್ ಕುಮಾರ್ ನೇಮಕವಾಗಿದ್ದಾರೆ.

ಇದೇ ವೇಳೆ 2027ರ ಅಧ್ಯಕ್ಷರಾಗಿ ಡಾ.ಬೃಂದಾ ಸುಹಾಸ್ ಗೋಧಿ ಅವರನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷ ಡಾ.ಎನ್.ಆರ್.ಪ್ರಮೋದ್ ಉಪಸ್ಥಿತರಿದ್ದರು.

Key words: Dr. R.G. Raghu, appointed, IDA,  Mysore Branch, President