ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಲು ಡಾ.ಜಿ.ಪರಮೇಶ್ವರ್ ಕಾರಣ- ಸಚಿವ ಡಾ.ಕೆ.ಸುಧಾಕರ್.

ತುಮಕೂರು,ಡಿಸೆಂಬರ್,24,2022(www.justkannada.in):  ನಾನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನಾಗಲು ಡಾ.ಜಿ.ಪರಮೇಶ್ವರ್ ಕಾರಣ ಎಂದು  ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ತುಮಕೂರು ಜಿಲ್ಲೆ  ಕೊರಟಗೆರೆ ತಾಲ್ಲೂಕು ದೊಡ್ಡಸೆಗ್ಗೆರೆ ಗ್ರಾಮದಲ್ಲಿ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ , 1993 ರಲ್ಲಿ ಪರಮೇಶ್ವರ್  ನನಗೆ ಎಂಬಿಬಿಎಸ್ ಸೀಟು ಕೊಟ್ಟರು. ಪ್ರಥಮ ಬಾರಿ ಶಾಸಕನಾಗಲು ಅವಕಾಶ ಕೊಟ್ಟಿದ್ದೇ ಡಾ.ಜಿ.ಪರಮೇಶ್ವರ್, 2013ರಲ್ಲೂ ನಾನು ಶಾಸಕನಾಗುವ ಅವಕಾಶ ಮಾಡಿಕೊಟ್ಟರು ಎಂದರು.

ನಾನು ಇಂದು ಬೇರೆ  ಪಕ್ಷದಲ್ಲಿದ್ದೇನೆ ಅದು ಬೇರೆ ಮಾತು. ಪರಮೇಶ್ವರ್ ನಡುವಿನ ಆತ್ಮಿಯತೆ ಯಾವತ್ತು ಮರೆಯಲ್ಲ. ತುಮಕೂರು ಅಭಿವೃದ್ದಿ ವಿಚಾರದಲ್ಲಿ ಯಾವುದೇ  ರಾಜಿ ಮಾಡಿಕೊಳ್ಳಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.

Key words: Dr. G. Parameshwar – Health and Medical Education- Minister -Dr. K. Sudhakar.