ಸಚಿವ ಸಂಪುಟ ವಿಸ್ತರಣೆ ವಿಚಾರ: ನಾವು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದ ರಮೇಶ್ ಜಾರಕಿಹೊಳಿ.

ಬೆಳಗಾವಿ,ಡಿಸೆಂಬರ್,24,2022(www.justkannada.in):  ಸಚಿವ ಸಂಪುಟ ವಿಸ್ತರಣೆ ವಿಚಾರ ಸಂಬಂಧ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋಗಲಿದ್ದಾರೆ ಎನ್ನಲಾಗಿದ್ದು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಇಂದು ಮಾತನಾಡಿದ ರಮೇಶ್ ಜಾರಕಿಹೊಳಿ,  ನಾವು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಸಿಎಂ ಮಾತಾಡಿರುವ ವಿಷಯವನ್ನು ಬಹಿರಂಗ ಮಾಡಲು ಆಗಲ್ಲ. ಸಿಎಂ ಬೊಮ್ಮಾಯಿ ಮೇಲೆ ನಮಗೆ ಗೌರವವಿದೆ. ಸಿಎಂ ಬೊಮ್ಮಾಯಿ ಹೇಳಿದಂತೆ ಅಧಿವೇಶನಕ್ಕೆ  ಹಾಜರಾಗಿದ್ದೇವೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.

ಮಂತ್ರಿ ಆಗ್ತಿವಿ. ಬಿಡ್ತೀವಿ ಬೇರೆ ವಿಷಯ.  ಜಿಲ್ಲೆ ಅಭಿವೃದ್ದಿ ಮಾಡಬೇಕು.  ವಿಶೇಷವಾಗಿ ಬೆಳಗಾವಿ ಗ್ರಾಮೀಣ ಭಾಗ ಅಭಿವೃದ್ದಿ ಮಾಡಬೇಕು ಎಂದು ರಮೇಶ್ ಜಾರಕಿಹೊಳಿ ಹೇಳಿದರು.

Key words: Cabinet expansion- issue-Ramesh Jarakiholi -expectations.