ಸೆಪ್ಟೆಂಬರ್’ಗೆ ಡಾಲಿ ನಟನೆಯ ‘ಜಮಾಲಿಗುಡ್ಡ’ ರಿಲೀಸ್

ಬೆಂಗಳೂರು, ಜೂನ್ 01, 2022 (www.justkannada.in): ಡಾಲಿ ಧನಂಜಯ ನಾಯಕರಾಗಿ ನಟಿಸಿರುವ ‘ಜಮಾಲಿಗುಡ್ಡ’ ಚಿತ್ರ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.

ಹೌದು. ಧನಂಜಯ ನಟನೆಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರತಂಡ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ.

ಅಂದಹಾಗೆ ಸೆಪ್ಟೆಂಬರ್ 9ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರದ ನಿರ್ಮಾಪಕರು ಘೋಷಿಸಿದ್ದಾರೆ.

ಡಾಲಿಗೆ ಅದಿತಿ ಪ್ರಭುದೇವ ನಾಯಕಿಯಾಗಿದ್ದು, ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ ಇತರರು ನಟಿಸಿದ್ದಾರೆ.

ಇದು 90ರ ದಶಕದಲ್ಲಿ ನಡೆಯುವ ಕಥೆಯಾಗಿದೆ. ಬಾರ್ ಸಪ್ಲೈಯರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಡಾಲಿ ಅವರ ಫಸ್ಟ್ ಲುಕ್ ಕೂಡ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.