ಕಾಫಿ ವಿತ್ ಕರಣ್ ಶೋಗೆ ವಿಜಯ್ ದೇವರಕೊಂಡ ಜೊತೆ ಹೋಗಿದ್ದು ಯಾರು !? ಶುರುವಾಯ್ತು ಪಿಸುಪಿಸು….

ಬೆಂಗಳೂರು, ಜೂನ್ 01, 2022 (www.justkannada.in): ವಿಜಯ್ ದೇವರಕೊಂಡ ಅವರ ಕುರಿತು ಈ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅಂದಹಾಗೆ ಇದು ಚಿತ್ರದ ಸುದ್ದಿಯಲ್ಲ ಬದಲಿಗೆ ಕಾಫಿ ವಿತ್ ಕರಣ್ ಶೋ ಕುರಿತ ಸುದ್ದಿ!

ಹೌದು. ವಿಜಯ್ ದೇವರಕೊಂಡ ಇತ್ತೀಚೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅದರ ಚಿತ್ರೀಕರಣ ಪೂರ್ಣಗೊಂಡಿದೆಯಂತೆ. ವಿಜಯ್ ಜತೆಗೆ ಸೆಟ್ ಹೋಗಿದ್ದು ಯಾರು ಎಂಬ ಕುತೂಹಲ ಮೂಡಿದೆ.

ಕಾರ್ಯಕ್ರಮದ ಸೆಟ್‍ನಲ್ಲಿ ವಿಜಯ್ ದೇವರಕೊಂಡ ಸಹಿ ಮಾಡಿರುವ ಕಾಫಿ ಕಪ್‍ಗಳ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಿಜಯ್ ಜತೆ ರಶ್ಮಿಕಾ ಅಥವಾ ಅನನ್ಯ ಪಾಂಡೆ ಭಾಗವಹಿಸಿದ್ದಾರೆ ಎಂಬ ಪಿಸುಪಿಸು ಆರಂಭವಾಗಿದೆ.

ಇನ್ನು ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಟ ಕರಣ್ ಜೋಹರ್ ಈ ಕಾರ್ಯಕ್ರಮದ ನಿರೂಪಕ. ಕೆಲವೊಮ್ಮೆ ಕಾಫಿ ವಿತ್ ಕರಣ್‍ನಲ್ಲಿ ಕ್ರೀಡಾ ಲೋಕದ ತಾರೆಗಳು ಹಾಗೂ ದಕ್ಷಿಣದ ಸಿನಿಮಾ ತಾರೆಯರು ಕೂಡ ಕಾಣಿಸಿಕೊಂಡಿದ್ದಾರೆ.