ದೇಶದ ಭವಿಷ್ಯಕ್ಕೆ, ಸಮೃದ್ಧಿಗೆ ಪ್ರಧಾನಿ ಮೋದಿ ಅವಶ್ಯಕ: ಕೇಂದ್ರ ಸಾಧನೆ ಕೊಂಡಾಡಿದ ಸಿಎಂ ಬೊಮ್ಮಾಯಿ.

ಉಡುಪಿ,ಜೂನ್,1,2022(www.justkannada.in): ದೇಶದ ಭವಿಷ್ಯ ಮತ್ತು ಸಮೃದ‍್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವಶ್ಯಕ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ನರೇಂದ್ರ ಮೋದಿ ಪ್ರಧಾನಿಯಾಗಿ 8 ವರ್ಷ ಪೂರೈಕೆ ಹಿನ್ನೆಲೆ ಕೇಂದ್ರ ಸರ್ಕಾರದ ಸಾಧನೆಗಳನ್ನ ಕೊಂಡಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇಶದಲ್ಲಿ ವಿದ್ಯುಚ್ಛಕ್ತಿ ,ಉಜ್ವಲ ಯೋಜನೆ ಯಶಸ್ವಿಯಾಗಿದೆ.  ಕೃಷಿ ಉತ್ಪಾದನೆ, ಸೇವಾವಲಯದಲ್ಲಿ ಅಭಿವೃದ‍್ಧಿಯಾಗಿದೆ. ಪ್ರಧಾನಿ ಮೋದಿ ಆರ್ಥಿಕ ಅಭಿವೃದ್ದಿಗೆ ಕ್ರಮ ಕೈಗೊಂಡಿದ್ದಾರೆ. ಮೇಕ್ ಇನ್ ಇಂಡಿಯಾಗೆ ಒತ್ತು ಕೊಡಲಾಗಿದ್ದು, ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಿದೆ. ಭಾರತಕ್ಕೆ ಹೊಸ ಮನ್ವಂತರ ಸೃಷ್ಠಿಯಾಗಿದೆ ಎಂದು ನುಡಿದರು.

ದೇಶದ ಅಭಿವೃದ್ಧಿ, ನವಭಾರತ ನಿರ್ಮಾಣ ಯಶಸ್ವಿಯಾಗುತ್ತಿದೆ. ದೇಶದಲ್ಲಿ ಆಹಾರ ಭದ್ರತೆ ಒದಗಿಸಲಾಗಿದೆ. ಗರೀಬ್ ಕಲ್ಯಾಣ್ ಯೋಜನೆ ಜಾರಿ ಮಾಡಲಾಗಿದೆ. ರಾಜ್ಯದ 25 ಲಕ್ಷ ಮನೆಗಳಗೆ ನೀರು ಒದಗಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Prime Minister-Modi -essential – country- future –prosperity-CM Bommai.