Tuesday, September 29, 2026

BDA Apartments

ಪ್ರಧಾನಿ ಮೋದಿ ಅವರ ಜನ್ಮದಿನದಂದು ಮೈಸೂರಿನಲ್ಲಿ ಡಿ.ಎಲ್ ಡ್ರೈವ್… BDA JK_Adv BDA Adv
Home Front Page ಪ್ರಧಾನಿ ಮೋದಿ ಅವರ ಜನ್ಮದಿನದಂದು ಮೈಸೂರಿನಲ್ಲಿ ಡಿ.ಎಲ್  ಡ್ರೈವ್….

ಪ್ರಧಾನಿ ಮೋದಿ ಅವರ ಜನ್ಮದಿನದಂದು ಮೈಸೂರಿನಲ್ಲಿ ಡಿ.ಎಲ್  ಡ್ರೈವ್….

ಮೈಸೂರು,ಸೆ,14,2019(www.justkannada.in): ಪ್ರಧಾನಿ ಮೋದಿ ಅವರ  ಜನ್ಮ ದಿನದ ಅಂಗವಾಗಿ ಮೈಸೂರಿನಲ್ಲಿ ಡಿ. ಎಲ್  ಡ್ರೈವ್ ಕಾರ್ಯಕ್ರಮ ನಡೆಯಲಿದ್ದು ಅಂದು ಅರ್ಹರಿಗೆ  ಡಿ. ಎಲ್ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಎಸ್.ಎ ರಾಮದಾಸ್ ತಿಳಿಸಿದರು.

ಶಾಸಕ ಎಸ್. ಎ ರಾಮದಾಸ್ ನೇತೃತ್ವದಲ್ಲಿ  ಡಿ. ಎಲ್  ಡ್ರೈವ್ ನಡೆಯಲಿದ್ದು, ಶಾಸಕ ಎಸ್. ಎ ರಾಮದಾಸ್  ಹಾಗೂ  ಇತರೆ ಸಂಘ ಸಂಸ್ಥೆಗಳಿಂದ  ಸಂಯೋಗದಲ್ಲಿ  ಅರ್ಹರಿಗೆ ಡಿ. ಎಲ್  ವಿತರಣೆ ಕಾರ್ಯಕ್ರಮ ನಡೆಯಲಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಇದೇ  ಸೆಪ್ಟಂಬರ್ l7ರ ಮಧ್ಯಾಹ್ನ  ನಗರದ ವಸ್ತು ಪ್ರದರ್ಶನದ ಆವರಣದಲ್ಲಿ ಅರ್ಹರಿಗೆ  ಡಿ. ಎಲ್  ವಿತರಣೆ ಮಾಡಲಾಗುತ್ತದೆ. ಈಗಾಗಲೇ ಗೂಡ್ಸ್,  ಆಟೋ, ಲಾರಿ, ಬಸ್, ದ್ವಿಚಕ್ರ ವಾಹನಗಳ ಚಾಲಕರನ್ನ ನೋಂದಾಯಿಸಿಕೊಂಡಿದ್ದು  ಇದೆ  ಸೆಪ್ಟಂಬರ್ l7ಕ್ಕೆ ವಿತರಿಸಲಾಗುವುದು. ಡಿ  ಎಲ್ ವಿತರಣಾ ಕಾರ್ಯಕ್ರಮಕ್ಕೆ  ಉಪ ಮುಖ್ಯಮಂತ್ರಿ ಲಕ್ಷಣ ಸವದಿ, ಕೇಂದ್ರ ಮಾಜಿ ಸಚಿವ ದಿ. ಅನಂತ್ ಕುಮಾರ್ ಅವರ ಪತ್ನಿ ಡಾ. ತೇಜಸ್ವಿನಿ ಅನಂತ್ ಕುಮಾರ್ ಆಗಮಿಸಲಿದ್ದಾರೆ  ಎಂದು ತಿಳಿಸಿದರು.

Key words: DL Drive – Mysore – PM Modi’s- Birthday-MLA ramadas