ಮೈಸೂರು ರಂಗಾಯಣ ಸೇರಿ ನಾಲ್ಕು ರಂಗಾಯಣದ ನಿರ್ದೇಶಕರುಗಳನ್ನ ಸೇವೆಯಿಂದ ಬಿಡುಗಡೆಗೊಳಿಸಿದ  ರಾಜ್ಯ ಸರ್ಕಾರ…

ಮೈಸೂರು,ಸೆ,14,2019(www.justkannada.in): ಮೈಸೂರು ರಂಗಾಯಣ ಸೇರಿ ನಾಲ್ಕು ರಂಗಾಯಣದ ನಿರ್ದೇಶಕರುಗಳನ್ನ ಸೇವೆಯಿಂದ ಬಿಡುಗಡೆಗೊಳಿಸಿ  ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ ಸಮ್ಮಿಶ್ರ ಸರ್ಕಾರದ ವೇಳೆ ಮೈಸೂರು ರಂಗಾಯಣದ ನಿರ್ದೇಶಕಿಯಾಗಿ   ಭಾಗೀರಥಿ ಬಾಯಿ ಕದಂ ಅವರು ನೇಮಕವಾಗಿದ್ದರು.  ಮೈಸೂರಿನ  ರಂಗಾಯಣ ನಿರ್ದೇಶಕರು ಸೇರಿದಂತೆ  ಶಿವಮೊಗ್ಗ,  ಕಲಬುರಗಿ,  ಧಾರವಾಡದ ನಿರ್ದೇಶಕರುಗಳನ್ನೂ ರಾಜ್ಯ ಸರ್ಕಾರ ಸೇವೆಯಿಂದ ಬಿಡುಗಡೆಗೊಳಿಸಿದೆ. ಸದ್ಯ  ಈ ಸಂಸ್ಥೆಗಳಿಗೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಅವರನ್ನೇ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

 

Key words: State Government -dismissed –Mysore- Theater Director