Saturday, September 12, 2026

BDA Apartments

ಡಿಕೆಶಿ, ಸಿದ್ಧರಾಮಯ್ಯ ಏನೇ ಸರ್ಕಸ್ ಮಾಡಿದ್ರೂ ಗೆಲ್ಲಲ್ಲ: ಬಿಜೆಪಿಯೇ ಅಧಿಕಾರ...
Home Front Page ಡಿಕೆಶಿ, ಸಿದ್ಧರಾಮಯ್ಯ ಏನೇ ಸರ್ಕಸ್ ಮಾಡಿದ್ರೂ ಗೆಲ್ಲಲ್ಲ: ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ- ಸಚಿವ ಶ್ರೀರಾಮುಲು.

ಡಿಕೆಶಿ, ಸಿದ್ಧರಾಮಯ್ಯ ಏನೇ ಸರ್ಕಸ್ ಮಾಡಿದ್ರೂ ಗೆಲ್ಲಲ್ಲ: ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ- ಸಚಿವ ಶ್ರೀರಾಮುಲು.

ಹಾವೇರಿ,ಮಾರ್ಚ್,31,2023(www.justkannada.in): ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಏನೇ ಸರ್ಕಸ್ ಮಾಡಿದ್ರೂ  ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್  ಗೆಲ್ಲಲ್ಲ.  ಬಿಜೆಪಿಯೇ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತದೆ ಎಂದು  ಸಚಿವ ಶ್ರೀರಾಮುಲು ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಶ್ರೀರಾಮುಲು,  ಮುಂದಿನ ದಿನಗಲ್ಲಿ ಕಾಂಗ್ರೆಸ್ ದಿವಾಳಿಯಾಗಲಿದೆ. ಜನರಿಗೆ ಟೋಪಿ ಹಾಕಿವುದು, ಕಿವಿಯಲ್ಲಿ ಹೂವು ಇಡುವುದು. ಡೋಂಗಿ ಹೇಳಿಕೆಗಳು ನೀಡುವುದೇ ಕಾಂಗ್ರೆಸ್ ನಾಯಕರ ಕೆಲಸ. ನಮ್ಮ ಸರ್ಕಾರ ಮೀಸಲಾತಿ ಪರಿಷ್ಕರಣೆ ಮಾಡಿದ್ದಕ್ಕೆ ಕಾಂಗ್ರೆಸ್ಸಿಗರ ನಿದ್ದೆಗೆಡಿಸಿದೆ ಎಂದು ಟಾಂಗ್ ನೀಡಿದರು.ಡಿಕೆಶಿ sriramulu

ಈಗ ಕಾಂಗ್ರೆಸ್ ನಲ್ಲಿ ಮಾರಿಹಬ್ಬ ಶುರುವಾಗಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 140 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

Key words:  DK shivakumar – Siddaramaiah -will -not win- Minister- Shriramulu.