Wednesday, August 5, 2026

BDA Apartments

Home Front Page 17 ಶಾಸಕರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದವರು ಈಗ ಯಾಕೆ ಕರೆ ಮಾಡಬೇಕು..? ಕಾಂಗ್ರೆಸ್ ಗೆ ಜಗದೀಶ್...

17 ಶಾಸಕರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದವರು ಈಗ ಯಾಕೆ ಕರೆ ಮಾಡಬೇಕು..? ಕಾಂಗ್ರೆಸ್ ಗೆ ಜಗದೀಶ್ ಶೆಟ್ಟರ್ ಟಾಂಗ್.

ಬಾಗಲಕೋಟೆ,ಮಾರ್ಚ್,31,2023(www.justkannada.in): ಬಿಜೆಪಿ ಶಾಸಕರಿಗೆ  ಡಿ.ಕೆ ಶಿವಕುಮಾರ್ ಕರೆ ಮಾಡುತ್ತಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಸಂಬಂಧ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಜಗದೀಶ್ ಶೆಟ್ಟರ್,  17 ಶಾಸಕರು ಬಂದಿದ್ದರಿಂದ ನಮ್ಮ ಸರ್ಕಾರ ರಚನೆಯಾಯಿತು. ಆಗ ಸದನದಲ್ಲಿ ಸಿದ್ಧರಾಮಯ್ಯ ಮತ್ತು ರಮೇಶ್ ಕುಮಾರ್ ಏನು ಹೇಳಿದ್ರು..?  17 ಶಾಸಕರು  ವಾಪಸ್ ಬಂದರೆ ಮತ್ತೆ ಪಕ್ಷಕ್ಕೆ ಸೇರಿಕೊಳ್ಳಲ್ಲ ಎಂದಿದ್ದರು. ಈಗ ಮತ್ತೆ  ಶಾಸಕರಿಗೆ ಯಾಕೆ ಕರೆ ಮಾಡಬೇಕು ಎಂದು ಕುಟುಕಿದರು.

ಮೇಘಾಲಯ ತ್ರಿಪುರದಲ್ಲೂ ಕಾಂಗ್ರೆಸ್ ಧೂಳಿಪಟವಾಗಿದೆ. ಕಾಂಗ್ರೆಸ್  ಮುಳುಗುತ್ತಿರುವ ಹಡಗು ಅಲ್ಲ ಮುಳುಗಿರುವ ಹಡಗು.  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Key words: Former CM-Jagdish Shetter- Tong – Congress.