Saturday, August 8, 2026

BDA Apartments

Home Front Page ಗೆಳೆಯ ಡಿ.ಕೆ ಶಿವಕುಮಾರ್ ಅದಷ್ಟು ಬೇಗ ಸಂಕಷ್ಟದಿಂದ ಪಾರಾಗಲಿ- ಡಿಸಿಎಂ ಗೋವಿಂದ ಕಾರಜೋಳ…

ಗೆಳೆಯ ಡಿ.ಕೆ ಶಿವಕುಮಾರ್ ಅದಷ್ಟು ಬೇಗ ಸಂಕಷ್ಟದಿಂದ ಪಾರಾಗಲಿ- ಡಿಸಿಎಂ ಗೋವಿಂದ ಕಾರಜೋಳ…

ಮಡಿಕೇರಿ,ಸೆ,4,2019(www.justkannada.in):  ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರನ್ನ ಇಡಿ ಬಂಧಿಸಿರುವ ಹಿನ್ನೆಲೆ, ಡಿ.ಕೆ ಶಿವಕುಮಾರ್ ಅದಷ್ಟು ಬೇಗ ಸಂಕಷ್ಟದಿಂದ ಪಾರಾಗಿ ಬರಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ನುಡಿದಿದ್ದಾರೆ.

ಇಡಿಯಿಂದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ಇದನ್ನ ರಾಜಕೀಯ ಪ್ರೇರಿತ ಅನ್ನುವುದು ಸರಿಯಲ್ಲ. ಮೊದಲಿನಿಂದಲೂ ಇಡಿ ಐಟಿ ಪ್ರಕರಣಗಳೂ ಸಾಕಷ್ಟಿವೆ. ಎಲ್ಲಾ ಕೇಸ್ ಗಳನ್ನ ರಾಜಕೀಯ ಪ್ರೇರಿತ ಎಂದರೇ ತಪ್ಪಾಗುತ್ತೆ ಎಂದು ಹೇಳಿದರು.

ಹಾಗೆಯೇ ಇಡಿ ಐಟಿ ಸಂವಿಧಾನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತವೆ.  ಗೆಳೆಯ ಡಿ.ಕೆ ಶಿವಕುಮಾರ್ ಅದಷ್ಟು ಬೇಗ ಸಂಕಷ್ಟಗಳಿಂದ ಪಾರಾಗಿ ಬರಲಿ ಎಂದು ಗೋವಿಂದ ಕಾರಜೋಳ ತಿಳಿಸಿದರು.

Key words: DK Shivakumar- out – trouble-soon – DCM- Govinda Karajola