ಡಿ.ಕೆ ಶಿವಕುಮಾರ್ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್ ಶಾಸಕರ ಬೆಂಬಲ- ಹೆಚ್.ಡಿ ಕುಮಾರಸ್ವಾಮಿ ಓಪನ್ ಆಫರ್.

ಬೆಂಗಳೂರು,ನವೆಂಬರ್,4,2023(www.justkannada.in): ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತೇನೆ ಎಂಬ ಸಿಎಂ ಸಿದ್ಧರಾಮಯ್ಯ ಹೇಳಿಕೆ ಬೆನ್ನಲ್ಲೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು ಈ ಮಧ್ಯೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಓಪನ್ ಆಫರ್ ವೊಂದನ್ನ ನೀಡಿದ್ದಾರೆ.

ಡಿ.ಕೆ ಶಿವಕುಮಾರ್​ ನಾಳೆ ಸಿಎಂ ಆಗೋದಾದರೇ ಜೆಡಿಎಸ್ ಶಾಸಕರ ಬೆಂಬಲ ಕೊಡುವುದಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಜೆಡಿಎಸ್ ಕಚೇರಿಯಲ್ಲಿ ಹೇಳಿದ್ದಾರೆ. ಹೌದು, ಡಿಕೆ ಶಿವಕುಮಾರ್ ನಾಳೆ ಸಿಎಂ ಆಗುವುದಾದರೆ ನಮ್ಮ 19 ಜನ ಶಾಸಕರ ಬೆಂಬಲ‌ ಕೊಡುತ್ತೇನೆ ಎಂದು ಆಫರ್ ನೀಡಿದ್ದಾರೆ.

Key words: DK Shivakumar –becomes- CM –tomorrow-support -JDS MLAs – HD Kumaraswamy