Wednesday, September 16, 2026

BDA Apartments

Home Front Page ಪಕ್ಷದಲ್ಲಿ ವಿ.ಸೋಮಣ್ಣಗೆ ಅಸಮಾಧಾನ ಇರುವುದು ನಿಜ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಪಕ್ಷದಲ್ಲಿ ವಿ.ಸೋಮಣ್ಣಗೆ ಅಸಮಾಧಾನ ಇರುವುದು ನಿಜ- ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

ಮೈಸೂರು,ಅಕ್ಟೋಬರ್,10,2023(www.justkannada.in): ಪಕ್ಷದಲ್ಲಿ ವಿ.ಸೋಮಣ್ಣಗೆ ಅಸಮಾಧಾನ ಇರುವುದು ನಿಜ ಎಂದು  ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ವಿ.ಸೋಮಣ್ಣ ಪವರ್ ಫುಲ್ ಲೀಡರ್. ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವ ಶಕ್ತಿ ಸೋಮಣ್ಣಗೆ ಇತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.ಪಕ್ಷದಲ್ಲಿ ವಿ.ಸೋಮಣ್ಣಗೆ ಅಸಮಾಧಾನ ಇರುವುದು ನಿಜ kse

ಸೋಮಣ್ಣಗೆ ಅಸಮಾಧಾನವಿರುವುದು ಸತ್ಯ.  ಕೇಂದ್ರ ಬಿಜೆಪಿ ನಾಯಕರು ವಿ.ಸೋಮಣ್ಣರನ್ನು ಕೈ ಬಿಡುವುದಿಲ್ಲ. ಯಾರಿಗೆ, ಯಾವ ಸ್ಥಾನ ನೀಡಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ಅಧ್ಯಕ್ಷರಿಂದಲೇ ಪಕ್ಷ ಬೆಳೆಯುತ್ತದೆ ಎಂಬುವುದು ತಪ್ಪು ಕಲ್ಪನೆ  ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: displeasure- V. Somanna  – former minister K. S. Eshwarappa