Sunday, August 23, 2026

BDA Apartments

Home Front Page ಮೂರು ತಿಂಗಳಲ್ಲೇ ಗೃಹಲಕ್ಷ್ಮೀ ಯೋಜನೆ ಮುಕ್ತಾಯ- ಮಾಜಿ ಸಿಎಂ ಬೊಮ್ಮಾಯಿ ಟೀಕೆ.

ಮೂರು ತಿಂಗಳಲ್ಲೇ ಗೃಹಲಕ್ಷ್ಮೀ ಯೋಜನೆ ಮುಕ್ತಾಯ- ಮಾಜಿ ಸಿಎಂ ಬೊಮ್ಮಾಯಿ ಟೀಕೆ.

ಬಾಗಲಕೋಟೆ,ಅಕ್ಟೋಬರ್,10,2023(www.justkannada.in): ಮೂರು ತಿಂಗಳಲ್ಲೇ ಗೃಹಲಕ್ಷ್ಮೀ ಯೋಜನೆ ಮುಕ್ತಾವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ  ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಬಸವರಾಹ ಬೊಮ್ಮಾಯಿ, ಮೊದಲ ತಿಂಗಳಲ್ಲೆ  ಹಲವು ಮಹಿಳೆಯರಿಗೆ ಹಣ ಬಂದಿಲ್ಲ.  ಮೊದಲ ಕಂತಿನ ಹಣ ಬಂದರುವವರಿಗೆ 2ನೇ ಕಂತು ಬಂದಿಲ್ಲ. ಹೀಗಾಗಿ ಗೃಹಲಕ್ಷ್ಮೀ ಯೋಜನೆಯಲ್ಲಿ ಬಹಳಷ್ಟು ಗೊಂದಲ ಇದೆ. ಇದು  3ನೇ ತಿಂಗಳಿಗೆ ಮುಕ್ತಾಯವಾಗುತ್ತದೆ ಎಂದು ತಿಳಿಸಿದರು.

ಆದಷ್ಟು ಬೇಗ ವಿಪಕ್ಷ ನಾಯಕನ ಆಯ್ಕೆಯಾಗುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರು ಇದ್ದಾರೆ ಕೆಲಸ ಮಾಡುತ್ತಿದ್ದಾರೆ. ಎರಡನ್ನೂ ಒಟ್ಟಿಗೆ ಮಾಡಲು ವಿಳಂಬವಾಗುತ್ತಿದೆ.  ಈಗಾಗಲೇ ಕೇಂದ್ರದ ನಾಯಕರ ಜೊತೆ ಮಾತನಾಡಿದ್ದೇನೆ . 5 ರಾಜ್ಯಗಳ ಟಿಕೆಟ್ ಫೈನಲ್ ಬಳಿಕ ನಿರ್ಧಾರವಾಗಲಿದೆ ಎಂದು ತಿಳಿಸಿದರು.

Key words: Grilahakshmi –project- completed –within- three months- Former CM- Bommai