Saturday, August 8, 2026

BDA Apartments

Home Front Page ಜಾತಿ ಜನಗಣತಿ ವರದಿ ಬಗ್ಗೆ ಅ.18 ರಂದು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ- ಸಿಎಂ ಸಿದ್ದರಾಮಯ್ಯ

ಜಾತಿ ಜನಗಣತಿ ವರದಿ ಬಗ್ಗೆ ಅ.18 ರಂದು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅಕ್ಟೋಬರ್,7,2024 (www.justkannada.in): ಜಾತಿ ಜನಗಣತಿ ವರದಿ ಬಗ್ಗೆ ಅಕ್ಟೋಬರ್ 18 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅಹಿಂದ ನಾಯಕರ ಸಭೆ ಬಳಿಕ  ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿ ಜನಗಣತಿ ವರದಿ ಅಂಗೀಕರಿಸುವಂತೆ ಎಲ್ಲರೂ ಒತ್ತಾಯಿಸಿದ್ದಾರೆ. ಜಾತಿಜನಗಣತಿ ವರದಿ ಜಾರಿ ಮಾಡುವಂತೆ ಮನವಿ ಪತ್ರ ನೀಡಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಜಾತಿ ಜನಗಣತಿ ನಡೆಸಲಾಗಿದೆ 2014ರಲ್ಲಿ ಕಾಂತರಾಜು ನೇತೃತ್ವದಲ್ಲಿ ಜಾತಿಜನಗಣತಿ ನಡೆಸಲಾಗಿದ್ದು, ವರದಿಯನ್ನು ಇನ್ನೂ ನಾನು ನೋಡಿಲ್ಲ ಎಂದರು.

ಈ ಹಿಂದೆ ಹೆಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರದಿ ಸಲ್ಲಿಸಲು ಮುಂದಾಗಿದ್ದು   ಅದ್ರೆ ಅಂದಿನ ಸಿಎಂ ಹೆಚ್ ಡಿ ಕುಮಾರಸ್ವಾಮಿ ವರದಿ ಪಡೆಯಲು ಒಪ್ಪಲಿಲ್ಲ. ಅಕ್ಟೋಬರ್ 18 ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: Discussion, decision, caste census, report, CM Siddaramaiah