ಮಕ್ಳೇ ಪರೀಕ್ಷೆ ಭಯನಾ…? ನಿಮಗಾಗಿ ಯೋಗರಾಜ್​ ಭಟ್​ ಹಾಡು ರೆಡಿ ಮಾಡಿದ್ದಾರೆ!

ಬೆಂಗಳೂರು, ಫೆಬ್ರವರಿ 28, 2020 (www.justkannada.in): ನಿರ್ದೇಶಕ ಯೋಗರಾಜ್​ ಭಟ್​ ‘ಪರೀಕ್ಷೆನಾ ಬಡಿಯ’ ಅನ್ನೋ ಹಾಡು ಸಿದ್ಧಪಡಿಸ್ತಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರವಾಗ್ತಿದ್ದು, ಈ ನಿಟ್ಟಿನಲ್ಲಿ ಹೊಸ ಹಾಡು ರೆಡಿ ಮಾಡಿದ್ದಾರೆ.
ಈ ಹಿಂದೆ ಚುನಾವಣೆ, ಜಿಎಸ್​​ಟಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಸಾಹಿತ್ಯ ಬರೆದು ಸಾಂಗ್​ ಕಂಪೋಸ್​ ಮಾಡಿದ್ದರು.

ಸದ್ಯ ಯೋಗರಾಜ್​ ಭಟ್​ ನಿರ್ದೇಶನದ ಗಾಳಿಪಟ -2 ಚಿತ್ರ ನಿರ್ಮಾಣವಾಗ್ತಿದ್ದು, ‘ಪರೀಕ್ಷೆ ನಾ ಬಡಿಯ’ ಅನ್ನೋ ಸ್ಪೆಷಲ್​ ಸಾಂಗ್​ ರೆಡಿ ಮಾಡ್ತಿದ್ದಾರೆ.