ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ರಾಬರ್ಟ್’ಗೂ ತಟ್ಟಿದ ಡೆಡ್ಲಿ ಕೊರೊನಾ ವೈರಸ್ ಭೀತಿ

ಬೆಂಗಳೂರು, ಫೆಬ್ರವರಿ 28, 2020 (www.justkannada.in): ಡೆಡ್ಲಿ ಕೊರೊನಾ ವೈರಸ್ ಭೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಕ್ಕೂ ತಟ್ಟಿದೆ!

ಹೌದು, ಕೊರೊನಾ ವೈರಸ್ ನಿಂದಾಗಿ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಶೂಟಿಂಗ್ ಗೆ ಸಮಸ್ಯೆ ಉಂಟಾಗಿದೆ.

‘ರಾಬರ್ಟ್’ ಚಿತ್ರದ ಶೂಟಿಂಗ್ ಇನ್ನೂ ಕಂಪ್ಲೀಟ್ ಆಗಿ ಮುಗಿದಿಲ್ಲ. ಹಾಡುಗಳ ಚಿತ್ರೀಕರಣ ಬಾಕಿ ಇದೆ. ಸಾಂಗ್ಸ್ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಚಿತ್ರತಂಡ ಪ್ಲಾನ್ ಮಾಡಿತ್ತು.

ಸ್ಪೇನ್ ನಲ್ಲಿ ಹಾಡೊಂದನ್ನು ಚಿತ್ರೀಕರಣ ಮಾಡಲು ತಯಾರಿ ನಡೆದಿತ್ತು. ಆದ್ರೆ, ಕೊರೊನಾ ವೈರಸ್ ಭೀತಿಯಿಂದಾಗಿ ಅದು ಕ್ಯಾನ್ಸಲ್ ಆಗಿದೆ. ಸ್ಪೇನ್ ಬದಲು ಬೇರೆಡೆ ಚಿತ್ರೀಕರಣ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ.