Tuesday, September 15, 2026

BDA Apartments

Home Front Page ದೀಪಾವಳಿ ಸ್ಪೆಷಲ್: ಕೆಎಸ್’ಆರ್’ಟಿಸಿಯಿಂದ ನವೆಂಬರ್ 7 ರವರೆಗೆ ಒಂದು ಸಾವಿರ ಹೆಚ್ಚುವರಿ ಬಸ್ ವ್ಯವಸ್ಥೆ

ದೀಪಾವಳಿ ಸ್ಪೆಷಲ್: ಕೆಎಸ್’ಆರ್’ಟಿಸಿಯಿಂದ ನವೆಂಬರ್ 7 ರವರೆಗೆ ಒಂದು ಸಾವಿರ ಹೆಚ್ಚುವರಿ ಬಸ್ ವ್ಯವಸ್ಥೆ

ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ದೀಪಾವಳಿ ಹಬ್ಬದ ಅಂಗವಾಗಿ ನವೆಂಬರ್ 7 ರವರೆಗೆ 1 ಸಾವಿರ ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನಿಂದ ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ಹಾಗೂ ಅಂತರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್, ತಿರುವನಂತಪುರ, ಕೋಟಯಂ, ಚೆನ್ನೈ, ಕೊಯಮತ್ತೂರು, ಪುಣೆ, ಪಣಜಿಗೆ ಹಾಗೂ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್‌ಗಳ ಸೇವೆ ಇರಲಿವೆ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ.

ಈ ಸಂಬಂಧ ಮಾಹಿತಿ ನೀಡಿರುವ ಕೆಎಸ್ ಆರ್ ಟಿಸಿ ಅಧಿಕಾರಿಗಳು, ಪ್ರಯಾಣಿಕರು ನಿಗಮದ ವೆಬ್‍ಸೈಟ್ www.ksrtc.karnataka.gov.in ಹಾಗೂ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ.