ಮಾರ್ಚ್ 27ಕ್ಕೆ ಧ್ರುವ ಸರ್ಜಾ-ರಶ್ಮಿಕಾ ‘ಪೊಗರು’ ಮೊದಲ ಹಾಡು ರಿಲೀಸ್

ಬೆಂಗಳೂರು, ಮಾರ್ಚ್ 19, 2020 (www.justkannada.in): ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಸಿನಿಮಾದ ಮೊದಲ ಹಾಡು ಮಾರ್ಚ್ 27 ಕ್ಕೆ ಬಿಡುಗಡೆಯಾಗಲಿದೆ.

ಪೊಗರು ಸಿನಿಮಾದ ‘ಕರಾಬು’ ಎಂಬ ಹಾಡಿನ ಲಿರಿಕಲ್ ವಿಡಿಯೋ 27 ರಂದು ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗುತ್ತಿದೆ.

ಪೊಗರು ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆಯಾಗಿ ಭಾರೀ ಲೈಕ್ಸ್ ಪಡೆದಿತ್ತು. ಅದಾದ ಬಳಿಕ ಬಹುದಿನಗಳ ನಂತರ ಚಿತ್ರತಂಡದ ಕಡೆಯಿಂದ ಅಪ್ ಡೇಟ್ ಬರುತ್ತಿದೆ. ಆದರೆ ಸದ್ಯಕ್ಕೆ ಕೊರೋನಾವೈರಸ್ ಭೀತಿಯಿಂದಾಗಿ ಚಿತ್ರ ಬಿಡುಗಡೆ ಸಾಧ‍್ಯವಿಲ್ಲ.