Tuesday, November 3, 2026

Dasara Wishes

Happy Dasara
Home Front Page ಸ್ಟಿಂಗ್ ವಿಚಾರ: ರಾಜ್ಯ ಸರ್ಕಾರ ಹೆಚ್ ಡಿಕೆ ಅವರನ್ನ ಟಾರ್ಗೆಟ್ ಮಾಡಿದೆ- ಬಿವೈ ವಿಜಯೇಂದ್ರ

ಸ್ಟಿಂಗ್ ವಿಚಾರ: ರಾಜ್ಯ ಸರ್ಕಾರ ಹೆಚ್ ಡಿಕೆ ಅವರನ್ನ ಟಾರ್ಗೆಟ್ ಮಾಡಿದೆ- ಬಿವೈ ವಿಜಯೇಂದ್ರ

ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

ಬೆಂಗಳೂರು,ನವೆಂಬರ್,3,2026 (www.justkannada.in): ಅಪರೇಷನ್ ಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸ್ಟಿಂಗ್ ವಿಚಾರದಲ್ಲಿ ಸಿದ್ದರಾಮಯ್ಯ ಹೇಳಿಕೆಯನ್ನ ಬಹಳ ದಿನದಿಂದ ಗಮನಿಸಿರುವೆ.   ಅವರ ಪುತ್ರ ಯತೀಂದ್ರ ಮಾತನಾಡಿರುವುದನ್ನೂ ನೋಡಿದ್ದೇನೆ.  ಕೇಂದ್ರ ಸಚಿವ ಹೆಚ್ ಡಿಕೆ ಹೇಳಿಕೆಯನ್ನೂ ನೋಡಿದ್ದೇನೆ. ರಾಜ್ಯ ಸರ್ಕಾರ ಕುಮಾರಸ್ವಾಮಿ ಅವರನ್ನ ಟಾರ್ಗೆಟ್ ಮಾಡಿದೆ. ಅದರೆ ಸ್ಟಿಂಗ್ ಮಾಡಿದವರು ಯಾರು ಉದ್ದೇಶ ಏನು ಅಂತಾ ತನಿಖೆ ಆಗುತ್ತಿಲ್ಲ.  ಇದರಿಂದ ಸಿದ್ದರಾಮಯ್ಯ ಬೇಸರಗೊಂಡು ಹೈಕಮಾಂಡ್ ಗೆ ದೂರು ನೀಡಿದ್ದಾರೆ.  ಸ್ಟಿಂಗ್ ಮುನ್ನೆಲೆಗೆ ತಂದು ತಮ್ಮ ಬುಡಕ್ಕೆ ಬೆಂಕಿ ಇಟ್ಟುಕೊಂಡಿದ್ದಾರೆ ಎಂದರು.ಸಿಜೆಪಿಗೆ ಕಾಂಗ್ರೆಸ್ ನಿಂದ ಹಣಕಾಸಿನ ನೆರವು – ಬಿವೈ ವಿಜಯೇಂದ್ರ

ಮೋದಿ ಪ್ರಧಾನಿ ಆಗಿರುವುದರಿಂದ ಕಾಂಗ್ರೆಸ್ಸಿಗರು ಸಹಿಸುತ್ತಿಲ್ಲ. ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಧಿಕ್ಕರಿಸಿದ್ದಾರೆ.  ಇದನ್ನು ಅರ್ಥಮಾಡಿಕೊಳ್ಳದೆ ರಾಹುಲ್  ಗಾಂಧಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.Sting operation jk02_new jk02 new

Sting operation, issue, State government, target, HDK,  BY Vijayendra

English Summary
Title

Sting operation issue: State government has targeted HDK – BY Vijayendra

Short Description
BJP State President B.Y. Vijayendra launched an attack, alleging that the State Government is targeting Union Minister H.D. Kumaraswamy in connection with the 'Operation Sting' issue. Speaking to the media today, B.Y. Vijayendra stated that he has been observing Chief Minister Siddaramaiah's remarks regarding the sting operation for some time. He noted that he has also taken note of statements made by Siddaramaiah's son, Yathindra, as well as those by Union Minister H.D. Kumaraswamy. Vijayendra asserted that the State Government is targeting Kumaraswamy; however, there is no investigation into who conducted the sting or what their motives were. He added that Siddaramaiah, feeling distressed by the situation, has lodged a complaint with the party high command. Vijayendra remarked that by bringing the sting operation to the forefront, Siddaramaiah has effectively set fire to his own foundation.
Keywords
Sting operation, issue, State government, target, HDK, BY Vijayendra