ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಬೇಸರದ ಸುದ್ದಿ !

ಬೆಂಗಳೂರು, ಮಾರ್ಚ್ 19, 2020 (www.justkannada.in): ರಾಬರ್ಟ್ ಸಿನಿಮಾ ರಿಲೀಸ್ ಮುಂದೂಡಿಕೆಯಾಗುವುದು ಪಕ್ಕಾ ಆಗಿದೆ.

ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಸುದ್ದಿ ಚಿತ್ರ ತಂಡದಿಂದ ಹೊರ ಬಿದ್ದಿದೆ.

ಕೊರೋನಾವೈರಸ್ ಭೀತಿಯಿಂದಾಗಿ ಚಿತ್ರಮಂದಿರಗಳು ಬಂದ್ ಆಗಿದ್ದು, ಚಿತ್ರರಂಗದ ಕೆಲಸಗಳೂ ಸ್ಥಗಿತಗೊಂಡಿವೆ. ಹೀಗಾಗಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡುವುದು ಅನಿವಾರ್ಯವಾಗಿದೆ.

ಏಪ್ರಿಲ್ ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್ ಮಾಡಬೇಕೆಂದು ಈ ಮೊದಲು ಚಿತ್ರತಂಡ ಪ್ಲ್ಯಾನ್ ಮಾಡಿತ್ತು. ಆದರೆ ಈಗ ಕೊರೋನಾದಿಂದಾಗಿ ರಾಬರ್ಟ್ ರಿಲೀಸ್ ಮುಂದೂಡಿಕೆಯಾಗಿದೆ.