Sunday, August 23, 2026

BDA Apartments

Home Cinema ಕ್ರಿಸ್ ಮಸ್’ಗೆ ಪೊಗರು ರಿಲೀಸ್ ಪ್ಲಾನ್ ! ಮಾಹಿತಿ ಬಿಚ್ಚಿಟ್ಟ ಡೈರೆಕ್ಟರ್ ನಂದಕಿಶೋರ್

ಕ್ರಿಸ್ ಮಸ್’ಗೆ ಪೊಗರು ರಿಲೀಸ್ ಪ್ಲಾನ್ ! ಮಾಹಿತಿ ಬಿಚ್ಚಿಟ್ಟ ಡೈರೆಕ್ಟರ್ ನಂದಕಿಶೋರ್

ಬೆಂಗಳೂರು, 07, ನವೆಬರ್ 2020: ‘ಪೊಗರು’ ರಿಲೀಸ್ ಪ್ಲ್ಯಾನಿಂಗ್ ಬಗ್ಗೆ ನಿರ್ದೇಶಕ ನಂದಕಿಶೋರ್ ಮಾಹಿತಿ ಹಂಚಿಕೊಂಡಿದ್ದಾರೆ.

‘ಪೊಗರು’ ಚಿತ್ರವನ್ನು ಡಿಸೆಂಬರ್ 25ರ ಕ್ರಿಸ್‌ಮಸ್‌ ಹಬ್ಬದಂದು ಅಥವಾ ಜನವರಿ ತಿಂಗಳ ಸಂಕ್ರಾಂತಿ ಹಬ್ಬದಂದು ರಿಲೀಸ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ‘ಆ್ಯಕ್ಷನ್‌ ಪ್ರಿನ್ಸ್’ ಧ್ರುವ ಸರ್ಜಾ ಅಭಿನಯದ ಹೊಸ ಸಿನಿಮಾ ‘ದುಬಾರಿ’ಗೆ ಶುಕ್ರವಾರವಷ್ಟೇ ಮುಹೂರ್ತ ನೆರವೇರಿದೆ.  ‘ದುಬಾರಿ’ ಚಿತ್ರದಲ್ಲಿ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ‘ಇದು ಕೌಟುಂಬಿಕ ಚಿತ್ರವಾಗಿದೆ. ನನ್ನ ‘ರನ್ನ’ ಮತ್ತಿತರ ಸಿನಿಮಾಗಳಲ್ಲಿಇರುವಂತೆ ಇಲ್ಲಿಯೂ ಆ್ಯಕ್ಷನ್‌ ಸೀನ್‌ಗಳು ಇರುತ್ತದೆ. ಚಿತ್ರದಲ್ಲಿ ಧ್ರುವ ಅವರ ಪಾತ್ರ ಬೇರೆ ಥರವೇ ಇರಲಿದೆ. ಅವರಿಲ್ಲಿ ಅಲ್ಟ್ರಾ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ ನಂದಕಿಶೋರ್