ಕಾಮನ್ ಡಿಪಿ ಶೇರ್ ಮಾಡುವ ಮೂಲಕ ಕಮಲ್ ಹಾಸನ್’ಗೆ ಬರ್ತ್ ಡೇ ವಿಶ್ ಮಾಡಿದ ಫ್ಯಾನ್ಸ್

ಬೆಂಗಳೂರು, 07, ನವೆಂಬರ್ 2020: ಬಹುಭಾಷಾ ನಟ ಕಮಲ್‌ ಹಾಸನ್‌ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಹೌದು. ಕಮಲ್‌ ಹಾಸನ್‌ ಅವರು 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಎಲ್ಲರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

ಕೋವಿಡ್‌-19 ಹರಡುವ ಭೀತಿಯಿಂದ ಸಾರ್ವಜನಿಕವಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲಾಗುತ್ತಿಲ್ಲ. ಕೆಲವೇ ದಿನಗಳ ಹಿಂದೆ ಅಭಿಮಾನಿಗಳು ಈ ಬಾರಿ ಕಮಲ್‌ ಜನ್ಮದಿನಕ್ಕಾಗಿ ಕಾಮನ್‌ ಡಿಪಿ ಸಿದ್ಧಪಡಿಸಿದ್ದರು. ಅದನ್ನು ಕಮಲ್‌ ಪುತ್ರಿ ಶ್ರುತಿ ಹಾಸನ್‌ ಬಿಡುಗಡೆ ಮಾಡಿದ್ದರು.

ಕಾಮನ್‌ ಡಿಪಿ ಶೇರ್‌ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಅಭಿಮಾನಿಗಳು ಅವರಿಗೆ ಶುಭ ಕೋರುತ್ತಿದ್ದಾರೆ. ತಂದೆಗೆ ಶ್ರುತಿ ಹಾಸನ್‌ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.