Monday, September 14, 2026

BDA Apartments

ತನ್ನ ನಾಯಕತ್ವದ ಯಶಸ್ಸಿಗೆ ಧೋನಿಯೇ ಕಾರಣ ಎಂದ ವಿರಾಟ್ ಕೊಹ್ಲಿ… BDA JK_Adv BDA Adv
Home Front Page ತನ್ನ ನಾಯಕತ್ವದ ಯಶಸ್ಸಿಗೆ ಧೋನಿಯೇ ಕಾರಣ ಎಂದ ವಿರಾಟ್ ಕೊಹ್ಲಿ….

ತನ್ನ ನಾಯಕತ್ವದ ಯಶಸ್ಸಿಗೆ ಧೋನಿಯೇ ಕಾರಣ ಎಂದ ವಿರಾಟ್ ಕೊಹ್ಲಿ….

ಮುಂಬೈ,ಮೇ,31,2020(www.justkannada.in): ತನ್ನ ನಾಯಕತ್ವ ಯಶಸ್ಸಿಗೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯೇ ಕಾರಣ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ರವಿಚಂದ್ರನ್ ಅಶ್ವಿನ್ ಜೊತೆಗೆ ಇನ್ಸ್ಟಾ ಗ್ರಾಮ್ ಲೈವ್ ನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಪಂದ್ಯದ ವೇಳೆ ಬಹಳಷ್ಟು ವಿಚಾರಗಳನ್ನು ಧೋನಿ ಬಳಿ ಕೇಳಿದ್ದೇನೆ. ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನನ್ನ ಮೇಲೆ ಬಹಳಷ್ಟು ನಂಬಿಕೆ ಇಟ್ಟಿದ್ದರು. ಧೋನಿ ಆಟಗಾರರ ಕ್ಷಮತೆಯನ್ನು ಗಮನಿಸುತ್ತಾರೆ. ನನ್ನ ಬೆಳವಣಿಗೆಯಲ್ಲಿ ಧೋನಿಯ ಪಾತ್ರ ಮಹತ್ವದ್ದು. ನನ್ನ ನಾಯಕತ್ವ ಯಶಸ್ಸಿಗೆ ಅವರೇ ಕಾರಣ ಎಂದು ಹೇಳಿದ್ದಾರೆ.

Dhoni-team-india- captain-virat kohl