ಮನ್ ಕೀ ಬಾತ್: ರೈತರಿಗೆ ಸಿಹಿಸುದ್ದಿ ನೀಡಿದ ಪ್ರಧಾನಿ ನರೇಂದ್ರ ಮೋದಿ….

ನವದೆಹಲಿ,ಮೇ,31,(www.justkannada.in):  ದೇಶದ ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಇಂದು ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದು ಈ ವೇಳೆ ರೈತರಿಗೆ ಸಿಹಿಸುದ್ದಿ ನೀಡಿದ್ದಾರೆ.

ದೇಶದ ಹಲವು ಕಡೆಗಳಲ್ಲಿ ಮಿಡತೆಗಳ ದಾಳಿ ನಡೆಸುತ್ತಿದ್ದು, ಮಿಡತೆ ಹಾವಳಿ ತಡೆಗಟ್ಟಲು ಕೃಷಿ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು   ಪ್ರಧಾನಿ ಮೋದಿ ತಿಳಿಸಿದ್ದಾರೆ.