ಧರ್ಮಸ್ಥಳದ  ಕೇಸ್ ಬಗ್ಗೆ ತನಿಖೆಯಾಗಿ ತಪ್ಪಿತಸ್ಥರ ವಿರುದ್ದ ಶಿಕ್ಷೆಯಾಗಲಿ-ಸಚಿವ ರಾಮಲಿಂಗರೆಡ್ಡಿ

ಬೆಂಗಳೂರು,ಆಗಸ್ಟ್,11,2025 (www.justkannada.in):  ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ತನಿಖೆಯಾಗಲಿ ತಪ್ಪಿತಸ್ತರ  ವಿರುದ್ದ ಶಿಕ್ಷೆಯಾಗಲಿ  ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಈ ಕುರಿತು ಮಾತನಾಡಿದ ಸಚಿವ ರಾಮಲಿಗರೆಡ್ಡಿ,  ತನಿಖೆ ವಿಚಾರದಲ್ಲಿ ನಮ್ಮ ಸರ್ಕಾರ ಅತ್ಯಂತ ಪಾರದರ್ಶಕವಾಗಿದೆ.  ಹಿಂದೆ ಸಿಬಿಐ ತನಿಖೆಗೆ ನೀಡಲಾಗಿತ್ತು ಈಗ ಎಸ್ ಐಟಿ ತನಿಖೆ ನಡೆಸುತ್ತಿದೆ  ಬಿಜೆಪಿಗರು 4 ವರ್ಷ ಅಧಿಕಾರದಲ್ಲಿದ್ದರು ಏಕೆ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಈಗ ತನಿಖೆ ಆಗುತ್ತಾ ಇದೆ. ಈಗ ಮಾನಾಡುವುದು ಸರಿಯಲ್ಲ ಬಿಜೆಪಿಯವರ ಮಾತಿಗೆ ಬೆಲೆ ಕೊಡೋಕೆ ಹೋಗಬೇಡಿ ತನಿಖೆ ನಡೆಯುತ್ತಿರುವಾಗ ಮಾತನಾಡಿದರೇ ತಪ್ಪಾಗುತ್ತದೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದರು.

Key words: Dharmasthala case, investigated, punished ,Minister, Ramalingareddy