ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ: 15 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ- ಸಚಿವ ಕೆ.ಎಸ್ ಈಶ್ವರಪ್ಪ ವಿಶ್ವಾಸ.

ಮೈಸೂರು,ನವೆಂಬರ್,20,2021(www.justkannada.in): ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಜನಸ್ವಾರಾಜ್ ಮಾಡಲಾಗುತ್ತಿದೆ. ನಮ್ಮ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಈಗಾಗಲೆ ಘೋಷಣೆ ಮಾಡಲಾಗಿದ್ದು ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಿತ್ತೇವೆ ಎಂದು ಜನಸ್ವಾರಜ್ ಯಾತ್ರೆ ಉಸ್ತುವಾರಿ ಹಾಗೂ ಸಚಿವ ಕೆಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಜನಸ್ವಾರಜ್ ಯಾತ್ರೆ ಉಸ್ತುವಾರಿ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ಮೈಸೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಾಯಕರ ಸುದ್ದಿಗೋಷ್ಠಿ ನಡೆಯಿತು.ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಸೇರಿದಂತೆ ಹಲವರ ಭಾಗಿಯಾಗಿದ್ದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ಮೈಸೂರು ಚಾಮರಾಜನಗರ ಕ್ಷೇತ್ರದಲ್ಲಿ ಕೌಟಿಲ್ಯ ರಘು ನಮ್ಮ ಅಭ್ಯರ್ಥಿ ಆಗಿದ್ದಾರೆ. ಕಳೆದ ಬಾರಿ ಅಲ್ಪ ಮತಗಳಿಂದ ಸೊತ್ತಿದ್ದೇವು. ಈ‌ ಬಾರಿ ನಾವು ಗೆಲ್ಲುತ್ತೇವೆ. ರಾಜ್ಯದ 15 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ. ಈ ಬಾರಿ ಪಂಚಾಯತಿ ಸದಸ್ಯರು ನಮ್ಮನ್ನು ಬೆಂಬಲಿಸುತ್ತಾರೆ ಎಂದರು.

ವಿಧಾನಸಭೆಯಲ್ಲಿ ನಮಗೆ ಪೂರ್ಣ ಬಹುಮತ ಇದೆ. ವಿಧಾನ ಪರಿಷತ್ತಿನಲ್ಲೂ ಬಹುಮತ ಸಿಗುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನಾಲ್ಕು ತಂಡಗಳಲ್ಲಿ ಜನ ಸ್ವರಾಜ್ ಯಾತ್ರೆ ಮಾಡುತ್ತಿದ್ದೇವೆ. ನರೇಗಾ ಯೋಜನೆಯಡಿ ಎಲ್ಲ ಅಪೇಕ್ಷಿತರಿಗೂ ಜಾಬ್ ಕಾರ್ಡ್ ಕೊಡುತ್ತಿದ್ದೇವೆ. ಕಳೆದ ವರ್ಷ 15 ಕೋಟಿ ಮಾನವ ದಿನಗಳು ಮುಗಿದವು ಈ ವರ್ಷವೂ 13 ಕೋಟಿ ಮಾನವ ದಿನಗಳನ್ನು ನೀಡಿದ್ದಾರೆ. ಒಂದು ಕುಟುಂಬಕ್ಕೆ 100  ಮಾನವ ದಿನಗಳ ಮಿತಿಯನ್ನು 150 ದಿನಗಳಿಗೆ ವಿಸ್ತರಿಸಿದೆ. ಇದರಿಂದ 400 ಕೋಟಿ ರೂ. ಹೆಚ್ಚುವರಿ ಅನುದಾನ ಲಭ್ಯವಾಗಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಶಂಖ ಊದಲೂ ಅವರ ಬಳಿ ಜನರೇ ಇಲ್ಲ- ಎಚ್ ಡಿಕೆಗೆ ಸಚಿವ ಈಶ್ವರಪ್ಪ ಟಾಂಗ್.

ಮಳೆ ಅವಾಂತರ ಸಂದರ್ಭದಲ್ಲಿ ಬಿಜೆಪಿ ಶಂಖ ಊದುತ್ತಿದ್ದಾರೆ ಎಂದು ಟ್ವಿಟ್ ಮಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ, ಶಂಖ ಊದಲೂ ಅವರ ಬಳಿ ಜನರೇ ಇಲ್ಲ. ನಾವು ಗ್ರಾಮೀಣಾಭಿವೃದ್ಧಿ ಬಗ್ಗೆ ಶಂಖ ಊದುತ್ತಾ ಇದ್ದೀವಿ. ಅಭಿವೃದ್ಧಿ ಶಂಖ ಊದುತ್ತಾ ಇದ್ದೀವಿ‌. ನಮ್ಮ ಬಳಿ ಜನ ಇದ್ದಾರೆ. ಅವರ ಬಳಿ ಯಾರೂ ಇಲ್ಲ. ಪರಿಷತ್ ಚುನಾವಣೆ ಇದೆಯಲ್ಲ. ಎಷ್ಟು ಜನ ಗೆಲ್ತಾರೆ ಅವರು ನೋಡೋಣಾ ಎಂದು ಟಾಂಗ್ ನೀಡಿದರು.

Key words: Development works – us-We -will –win- more than- 15 places-Minister -KS Eshwarappa

ENGLISH SUMMARY…

Developmental works are our blessings: We are confident of winning 15+ seats – Minister K.S. Eshwarappa
Mysuru, November 20, 2021 (www.justkannada.in): “The Janswaraj Yatra is being conducted in the background of the Legislative Council elections. We have already announced the list of our candidates. We are confident of winning 15 plus seats in the MLC elections,” opined Janswaraj Yatra In-charge and Minister K.S. Eshwarappa.
He addressed a press meet in Mysuru today at the BJP office, which was attended by Union Minister Shobha Karandlaje, Mysuru District In-charge Minister S.T. Somashekar, BJP District President Mangala Somashekar, and others.
“Kautilya Raghu is our candidate in the Mysuru-Chamarajanagara constituency, which we had lost from a thin margin last time. But this time we will win here. We will win more than 15 seats across the State. The developmental works were undertaken in the State, and at the national level are our blessings. This time the Panchayat members are also supporting us,” he added.
Keywords: MLC elections/ Minister K.S. Eshwarappa/ Mysuru/ press meet/ 15 seats/ win