ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ- ಸಚಿವ ಡಾ.ಕೆ.ಸುಧಾಕರ್.

ಚಿಕ್ಕಬಳ್ಳಾಪುರ,ನವೆಂಬರ್,20,2021(www.justkannada.in):  ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು ಮನೆಗಳು ಕುಸಿದು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಮಳೆಯಿಂದ ಮನೆ ಕಳೆದುಕೊಂಡವರಿಗೆ ರೂ. 5 ಲಕ್ಷ ಪರಿಹಾರ ನೀಡುತ್ತೇವೆ, ಮನೆ ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ  ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾ ಮಳೆ ಹಿನ್ನೆಲೆ ಬೆಳ್ಳಂಬೆಳಿಗ್ಗೆ ಸಚಿವ ಡಾ .ಕೆ. ಸುಧಾಕರ್ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲಾವೃತವಾಗಿರುವ ಸೇತುವೆಗಳ ವೀಕ್ಷಣೆ ಮಾಡಿದರು. ನಗರದ ಕಂದವಾರ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ಅಲ್ಲಿಗೆ ತೆರಳಿ ವೀಕ್ಷಣೆ ಮಾಡಿದರು.

ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್,  50 ವರ್ಷಗಳ ಇತಿಹಾಸದಲ್ಲಿ ಇಂತಹ ಮಳೆ ನೋಡಿಲ್ಲ. ಚಿಕ್ಕಂದಿನಿಂದಲೂ ಇಂಥ ಮಳೆ ನೀರು ಹರಿಯುವುದನ್ನು ನೋಡಿಯೆ ಇಲ್ಲ. ಒಂದೆಡೆ ಸಂತಸವಾದ್ರೆ ಮತ್ತೊಂದೆಡೆ ಅನಾನುಕೂಲವಾಗಿ, ಜನ ಪರಿತಪಿಸುವತಾಗಿದೆ ಎಂದರು.

ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿವೆ. ಎಚ್ಚರಿಕೆಯ ಮಧ್ಯೆಯೂ ಕೆಲವರು ನೀರಿಗಿಳಿಯುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಜನರನ್ನು ಎಚ್ಚರಿಸಬೇಕು. ಮಳೆ ಆಪತ್ತನ್ನು ಎಲ್ಲರೂ ಒಗ್ಗಟ್ಟಗಾಗಿ ಎದುರಿಸೋಣ. ಮನೆ ಕಳೆದುಕೊಂಡವರು ಆತಂಕ ಪಡಬೇಕಾಗಿಲ್ಲ. ಜಿಲ್ಲಾಡಳಿತ ನಿಮ್ಮ ಜೊತೆ ಇರುತ್ತೆ ಎಂದು ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದರು.

Key words: rain-house-collapse- 5 lakhs compensation–people – Minister- Dr. K. Sudhakar

ENGLISH SUMMARY…

Rs. 5 lakh compensation to those who have lost houses due to rain: Minister Dr. K. Sudhakar
Chikkaballapura, November 2, 2021 (www.justkannada.in): “Due to the incessant rains that are lashing the state from the last few days has caused huge havoc at several places. While several farmers have lost their crops, several people have lost their houses which were destroyed due to the heavy rains. Hence, we have decided to provide a sum of Rs. 5 lakh for every family which has lost a house,” opined Dr. K. Sudhakar, Health and Medical Education Minister.
He visited several places in Chikkaballapura District where heavy rains have caused a lot of damage to property and crops. He visited several places, which are inundated in rainwater, and also visited the Kandawara tank, which has reached a dangerous level.
Speaking to the press persons later, Minister Dr. K. Sudhakar said, “We haven’t witnessed such huge rains in the last 50 years. I have also not seen this type of rain since my childhood. While I feel happy on one hand the rains have made all of us feel bad because many people are facing a lot of trouble.”
However, he said the State Government and the District Administration is ready to extend all kind of support to the people who are in trouble.
Keywords: Minister Dr. K. Sudhakar/ rains/ Chikkaballapur District/ Rs. 5 lakh compensation/ houses lost