ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ಧರಾಮಯ್ಯಗೆ ಸಚಿವ ಕೆ.ಎಸ್ ಈಶ್ವರಪ್ಪ ಟಾಂಗ್.

ಮೈಸೂರು,ನವೆಂಬರ್,20,2021(www.justkannada.in): ಚಾಮುಂಡೇಶ್ವರಿ ಚುನಾವಣೆ ಸೋಲಿನ ಬಗ್ಗೆ ಆಕ್ರೊಶ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿರುವ ಸಚಿವ ಕೆ.ಎಸ್ ಈಶ್ವರಪ್ಪ, ಪರಮೇಶ್ವರ್ ಅವರನ್ನು ಸೋಲಿಸಿದಾಗ ನಿಮಗೆ ನಾಚಿಕೆ ಆಗಲಿಲ್ಲವಾ  ?ಎಂದು ಪ್ರಶ್ನಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಕೆ.ಮರಿಗೌಡರಿಗೆ ಟಿಕೆಟ್ ನೀಡುವಂತೆ ಕೇಳಿದ ಅಭಿಮಾನಿಗಳನ್ನ ತರಾಟೆ ತೆಗೆದುಕೊಂಡಿದ್ಧ ಸಿದ್ಧರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿ ಈಗ ಟಿಕೆಟ್ ಕೇಳುತ್ತಿದ್ದೀರಾ..? ನಿಮಗೆ ನಾಚಿಕೆ ಆಗಲ್ವಾ..? ಎಂದು ಕಿಡಿಕಾರಿದ್ದರು.

ಈ ಬಗ್ಗೆ ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ಪರಮೇಶ್ವರ್ ಸೋಲಿನ ಬಗ್ಗೆ ಅವರನ್ನೇ ಕೇಳಿದ್ದೆ ಪರಮೇಶ್ವರ ಸಜ್ಜನ ವ್ಯಕ್ತಿ ಹೌದು ಅಂತಾನೂ ಹೇಳಲಿಲ್ಲ, ಇಲ್ಲ ಅಂತನೂ ಹೇಳಲಿಲ್ಲ. ನಿಮ್ಮ ಸೋಲು ಮಾತ್ರ ಸೋಲು ಬೇರೆಯವರ ಸೋಲು ಸೋಲಲ್ಲವೇ ? ನಿಮಗೆ ನಾಚಿಕೆ ಆಗಲಿಲ್ಲವಾ ಆಗ ? ಎಂದು ವಾಗ್ದಾಳಿ ನಡೆಸಿದರು.

ಬೇರೆಯವರಿಗೆ ಕೈ ತೋರಿದಾಗ ನಾಲ್ಕು ಬೆರಳು ನಮ್ಮ ಕಡೆ ಇರುತ್ತದೆ. ಮುಸ್ಲಿಂ ಅವರನ್ನು ಎರಡು ಭಾಗ ಮಾಡಿದಿರಿ. ಲಿಂಗಾಯತರನ್ನು ಒಡೆದು ಎರಡು ಭಾಗ ಮಾಡಿದ್ರಿ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮ ಎಂದು ಕೆ.ಎಸ್ ಈಶ್ವರಪ್ಪ ಹರಿಹಾಯ್ದರು.

Key words: mysore- minister- KS Eshwarappa- -former CM-Siddaramaiah -expresses -outrage – defeat-Chamundeshwari constituency