Monday, September 14, 2026

BDA Apartments

ರಾಯಚೂರಿನ ಏರ್ ಪೋರ್ಟ್ ಸ್ಥಾಪನೆಗೆ ಬೇಡಿಕೆ ವಿಚಾರ: ಯೋಜನೆ ಸಿದ್ಧಪಡಿಸಲು ಡಿಸ...
Home Front Page ರಾಯಚೂರಿನ ಏರ್ ಪೋರ್ಟ್ ಸ್ಥಾಪನೆಗೆ ಬೇಡಿಕೆ ವಿಚಾರ: ಯೋಜನೆ ಸಿದ್ಧಪಡಿಸಲು ಡಿಸಿಗೆ ಸೂಚನೆ- ಡಿಸಿಎಂ ಲಕ್ಷ್ಮಣ್...

ರಾಯಚೂರಿನ ಏರ್ ಪೋರ್ಟ್ ಸ್ಥಾಪನೆಗೆ ಬೇಡಿಕೆ ವಿಚಾರ: ಯೋಜನೆ ಸಿದ್ಧಪಡಿಸಲು ಡಿಸಿಗೆ ಸೂಚನೆ- ಡಿಸಿಎಂ ಲಕ್ಷ್ಮಣ್ ಸವದಿ

ರಾಯಚೂರು,ಸೆಪ್ಟಂಬರ್,17,2020(www.justkannada.in): ರಾಯಚೂರಿನ ಏರ್ ಪೋರ್ಟ್ ಸ್ಥಾಪನೆಗೆ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿವರವಾದ ಯೋಜನೆ ಸಿದ್ಧಪಡಿಸಲು ಡಿಸಿಗೆ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.jk-logo-justkannada-logo

ರಾಯಚೂರಿನಲ್ಲಿ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ರಾಯಚೂರಿನ ಏರ್ ಪೋರ್ಟ್ ಸ್ಥಾಪನೆಗೆ ಬೇಡಿಕೆ ವಿಚಾರ ಸಂಬಂಧ ವರದಿ ಸಿದ್ಧಪಡಿಸಲು ಸೂಚಿಸಿದ್ದೇನೆ. ವರದಿ ಸಿದ್ಧಗೊಂಡ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ವಿಮಾನ ನಿಲ್ದಾಣ ಸ್ಥಾಪನೆಯಿಂದ  ಶಿಕ್ಷಣಕ್ಕೆ ಒತ್ತು ನೀಡಿದಂತಾಗುತ್ತದೆ ಎಂದರು.demand-establishment-raichur-airport-dcm-laxman-savadi

ಹಾಗೆಯೇ ಕೇಂದ್ರ ಸರ್ಕಾರ ಐಐಐಟಿ ನೀಡಿದೆ. ರಾಯಚೂರಿನಲ್ಲೇ ಏಮ್ಸ್ ಸಂಸ್ಥೆ ರಾಯಚೂರಿನಲ್ಲೇ ಸ್ಥಾಪಿಸಲು ಯತ್ನಿಸಲಾಗುತ್ತದೆ.  ರಾಯಚೂರು ನಗರ ಅಭಿವೃದ್ಧಿಗೆ 100 ಕೋಟಿ ರೂ. ನೀಡಲಾಗಿದೆ ಎಂದು ಡಿಸಿಎಂ ಲಕ್ಷಣ್ ಸವದಿ ತಿಳಿಸಿದರು.

Key words: Demand – establishment – Raichur- Airport-DCM -Laxman Savadi