ಮೈಸೂರು ಜಿಲ್ಲೆಯಲ್ಲಿ ಜಿಂಕೆ ಭೇಟೆ: ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು

ಮೈಸೂರು, ಜುಲೈ 22, 2023 (www.justkannada.in): ಜಿಂಕೆ ಭೇಟೆಯಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನೇಗತ್ತೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಅಬ್ಬೂರಿನ ಮಧು, ಸಿಂಡೇನಹಳ್ಳಿ ಗ್ರಾಮದ ಪ್ರದೀಪ್ ಬಂಧಿತ ಆರೋಪಿಗಳು. ಮತ್ತಿಬ್ಬರು ಆರೋಪಿಗಳಾದ ರಾಜು, ಪ್ರಸನ್ನ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.

ಅರಣ್ಯಧಿಕಾರಿ ಹರ್ಷಕುಮಾರ್ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಯಾನಂದ್ ಆದೇಶದ ಮೇರೆಗೆ ದಾಳಿ ನಡೆಸಿರುವ ಅರಣ್ಯಾಧಿಕಾರಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ನಾಲ್ವರು ಆರೋಪಿಗಳು ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ವನ್ಯ ಜೀವಿ ಪ್ರದೇಶದಲ್ಲಿ ಜಿಂಕೆಯನ್ನ ಭೇಟೆಯಾಡಿ ಹೊಲದಲ್ಲಿ ಮಾಂಸವನ್ನ ಬಚ್ಚಿಟ್ಟಿದ್ದನ್ನ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ್ದ 3 ಕತ್ತಿ ಹಾಗೂ ಜಿಂಕೆ ಮಾಂಸ ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯಧಿಕಾರಿಗಳಾದ ರತನ್ ಕುನಾರ್, ಗಣರಾಜ್ ಪಟಕಾರ್, ಸಿದ್ದರಾಜು, ಪ್ರಸನ್ನ ಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.