ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡ ಮೊದಲ ಸ್ಥಾನ: ರಾಜ್ಯಕ್ಕೆ ಇವರೇ ಟಾಪರ್.

ಬೆಂಗಳೂರು,ಏಪ್ರಿಲ್,10,2024 (www.justkannada.in): ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು ಶೇ 81. 15ರಷ್ಟು ಫಲಿತಾಂಶ ಬಂದಿದೆ. ಈ ಮಧ್ಯೆ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದೆ.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ 97ರಷ್ಟು ಫಲಿತಾಂಶ ಬಂದಿದ್ದು ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಶೇ 96.80 ರಷ್ಟು ಮಂದಿ ಉತ್ತೀರ್ಣರಾಗುವುದರೊಂದಿಗೆ ಉಡುಪಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಶೇ 94.89ರಷ್ಟು ಫಲಿತಾಂಶದೊಂದಿಗೆ ವಿಜಯಪುರ ಜಿಲ್ಲೆ 3ನೇ ಸ್ಥಾನದಲ್ಲಿದೆ. ಕೊಡಗು 5ನೇ ಸ್ಥಾನದಲ್ಲಿದೆ.  ಫಲಿತಾಂಶದಲ್ಲಿ ಗದಗ ಜಿಲ್ಲೆಗೆ ಕೊನೆಯ ಸ್ಥಾನ ದೊರೆತಿದೆ.

ವಿಜ್ಞಾನ ವಿಭಾಗದಲ್ಲಿ ಶೇ 89.96%, ಕಲಾ ವಿಭಾಗದಲ್ಲಿ   68.36%, ವಾಣಿಜ್ಯ ವಿಭಾಗದಲ್ಲಿ ಶೇ 80.94% ಫಲಿತಾಂಶ ಬಂದಿದೆ.

ದ್ವಿತೀಯ ಪಿಯು ಪರೀಕ್ಷೆಗೆ 3.3 ಲಕ್ಷ ಹುಡುಗರು ಮತ್ತು 3.6 ಲಕ್ಷ ಹುಡುಗಿಯರು ಹಾಜರಾಗಿದ್ದರು. ರಾಜ್ಯದಾದ್ಯಂತ 1,124 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಗೆ ಒಟ್ಟು 6.98 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 5,52,690 ಮಂದಿ ತೇರ್ಗಡೆಯಾಗಿದ್ದಾರೆ 1,28448 ಕಲಾ 1,74,315 ವಾಣಿಜ್ಯ 2,49,927 ವಿಜ್ಞಾನ ವಿದ್ಯಾರ್ಥಿಳು ಪಾಸಾಗಿದ್ದಾರೆ.

ರಾಜ್ಯಕ್ಕೆ 598 ಅಂಕ ಪಡೆದು ವಿದ್ಯಾಲಕ್ಷ್ಮಿ ಪ್ರಥಮಸ್ಥಾನ ಗಳಿಸಿದ್ದಾರೆ.  ವಿಜ್ಞಾನ ವಿಭಾಗದಲ್ಲಿ ಹುಬ್ಬಳ್ಳಿಯ ವಿದ್ಯಾಲಕ್ಷ್ಮೀ 600ಕ್ಕೆ 598 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಪಿಯುಸಿ ಕಲಾ ವಿಭಾಗದಲ್ಲಿ ಇಬ್ಬರು ಟಾಪರ್​ಗಳಾಗಿದ್ದಾರೆ. ಕಲಾ ವಿಭಾಗದಲ್ಲಿ ಮೇಧಾ ಡಿ. ಟಾಪರ್ 600ಕ್ಕೆ 596 ಅಂಕಗಳನ್ನು ಪಡೆದರೆ, ವಿಜಯಪುರದ ವೇದಾಂತ್ ಕೂಡ 600ಕ್ಕೆ 596 ಅಂಕ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ 600ಕ್ಕೆ 597 ಅಂಕ ಪಡೆದು ಟಾಪರ್ ಆಗಿದ್ದಾರೆ.

Key words: Second PU ,Result, Dakshina Kannada