Friday, August 21, 2026

BDA Apartments

Home Front Page ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭ ಕುರಿತು ಇಂದು ನಿರ್ಧಾರ.

ರಾಜ್ಯದಲ್ಲಿ ಪ್ರಾಥಮಿಕ ಶಾಲೆ ಆರಂಭ ಕುರಿತು ಇಂದು ನಿರ್ಧಾರ.

ಬೆಂಗಳೂರು,ಆಗಸ್ಟ್,30.2021(www.justkannada.in):  ಕೋವಿಡ್ 3ನೇ ಅಲೆ ಭೀತಿ ನಡುವೆ ರಾಜ್ಯದಲ್ಲಿ ಈಗಾಗಲೇ 9,10 ಮತ್ತು ಪಿಯುಸಿ ತರಗತಿಗಳು ಆರಂಭವಾಗಿದ್ದು ಈ ಮಧ್ಯೆ ಪ್ರಾಥಮಿಕ ಶಾಲೆಗಳ ಆರಂಭಕ್ಕೂ ಇಂದು ಮುಹೂರ್ತ ಫಿಕ್ಸ್ ಆಗಲಿದೆ.

ಹೌದು ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಆರಂಭ ಕುರಿತು ಇಂದು ಸಿಎಂ ಬಸವರಾಜ  ಬೊಮ್ಮಾಯಿ ಅವರು  ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ನೀಡುವ ವರದಿ ಪರಿಗಣನೆ ಮಾಡಲಿದ್ದು ಶಾಲೆ ಆರಂಭಕ್ಕೆ ಗ್ರೀನ್ ಸಿಗುತ್ತದೆಯೇ ಎಂದು ಕಾದು ನೋಡಬೇಕಿದೆ.

6 ರಿಂದ 8ನೇ ತರಗತಿ ಆರಂಭ ಕುರಿತು ಇಂದಿನ ಸಿಎಂ ನೇತೃತ್ವದ ಮಹತ್ವದ ಸಭೆಯಲ್ಲಿ ನಿರ್ಧಾರವಾಗುವ  ಸಾಧ್ಯತೆ ಇದೆ. ಇನ್ನು 1 ರಿಂದ 5ನೇ ತರಗತಿ ಭೌತಿಕ ತರಗತಿ ಈಗಲೇ  ಪ್ರಾರಂಭ ಮಾಡಲು ಸರ್ಕಾರ ಮುಂದಾಗುವುದಿಲ್ಲ ಎನ್ನಲಾಗುತ್ತಿದ್ದು, ರಾಜ್ಯದ ಜನರ ಚಿತ್ತ  ಇದೀಗ ಸಿಎಂ ನೇತೃತ್ವದ ಇಂದಿನ ಸಭೆಯತ್ತ ಇದೆ.

Key words: Decision – primary school- opening – state