ವಿವಿಗಳಿಗೆ ಕೋವಿಡ್ ಮಾರ್ಗಸೂಚಿ ಬಗ್ಗೆ ಸಭೆಯಲ್ಲಿ ತೀರ್ಮಾನ- ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್.

ಚಿಕ್ಕಬಳ್ಳಾಪುರ,ಡಿಸೆಂಬರ್,21,2023(www.justkannada.in): ರಾಜ್ಯದಲ್ಲಿ ಕೋವಿಡ್ ಭೀತಿ ಹಿನ್ನೆಲೆ ವಿಶ್ವ ವಿದ್ಯಾನಿಲಯಗಳಲ್ಲಿ ಕಾಲೇಜುಗಳಲ್ಲಿ ಮಾರ್ಗಸೂಚಿ ಬಗ್ಗೆ ಇಂದು ನಡೆಯುವ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಎಂ.ಸಿ ಸುಧಾಕರ್,  ಕೊರೋನಾ ರೂಪಾಂತರಿ ಪರಿಣಾಮ ಇನ್ನೂ ಗೊತ್ತಾಗಿಲ್ಲ. ಮೊದಲ 2ನೇ ಅಲೆಯಲ್ಲಿ ಆದ ಸಾವು ನೋವು ಆಗಬಾರದು ಕೊರೋನಾ ಸಂಬಂಧ ಇಂದು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು ಎಂದರು.

ವಿವಿಗಳಿಗೆ ಕೊರೊನಾ ಮಾರ್ಗಸೂಚಿ ಬಗ್ಗೆ  ಸಿಎಂ ನೇತೃತ್ವದ ಸಭೆ ಬಳಿಕ ನಿರ್ಧಾರವಗಲಿದೆ. ಕಾಲೇಜುಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ  ಇಂದಿನ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಸಚಿವ ಎಂಸಿ ಸುಧಾಕರ್ ತಿಳಿಸಿದರು.

Key words: Decision – meeting – Covid guidelines – universities-Minister -MC Sudhakar.