ಸೆಕೆಂಡ್ ಲವ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರಿಯಕರನಿಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ.

ಬೆಂಗಳೂರು, ಡಿಸೆಂಬರ್,21,2023(www.justkannada.in): ಸೆಕೆಂಡ್ ಲವ್ ಸ್ಟೋರಿ ಬಗ್ಗೆ ಪ್ರಶ್ನಿಸಿದ ಪ್ರಿಯಕರನಿಗೆ ವಿವಾಹಿತ ಮಹಿಳೆ ಪ್ರೇಯಸಿ  ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಕೊಲೆಗೈದ ಘಟನೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಜಯ್ ಮೃತ ಪ್ರಿಯಕರ. ರಾಣಿ ಎಂಬಾಕೆಯೇ ಪ್ರಿಯಕರ ಸಂಜಯ್ ಗೆ ಬೆಂಕಿ ಹಚ್ಚಿ ಕೊಂದ ಪ್ರೇಯಸಿ.  ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್ ​ಸ್ಟೇಬಲ್ ಸಂಜಯ್ ಮತ್ತು ಹೋಮ್ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವಿವಾಹಿತೆ ರಾಣಿ ಇಬ್ಬರು ಪರಸ್ಪರ ಲವ್ ನಲ್ಲಿ ಬಿದ್ದಿದ್ದರು. ಇಬ್ಬರ ಮಧ್ಯೆ ಪ್ರೇಮ ಬೆಳೆದಿತ್ತು. ಮದುವೆಯಾಗಿದ್ದರೂ ಕಾನ್​​ಸ್ಟೇಬಲ್ ಜೊತೆ ಕೆಲವು ತಿಂಗಳಿಂದ ರಾಣಿ ಪ್ರೀತಿಸುತ್ತಿದ್ದಳು.

ಇತ್ತೀಚೆಗೆ ಸಂಜಯ್ ​ನನ್ನು ರಾಣಿ ಅವೈಡ್ ಮಾಡಲು ಶುರು ಮಾಡಿದ್ದ,  ಹೀಗಾಗಿ ಎರಡು ದಿನಗಳ ಹಿಂದೆ ಸಂಜಯ್ ರಾಣಿ ಮಮನೆಗೆ ಹೋಗಿದ್ದರು. ಈ ವೇಳೆ  ಮತ್ತೊಬ್ಬನೊಂದಿಗೆ ಪ್ರೀತಿಯಲ್ಲಿರುವ ವಿಚಾರ ಸಂಜಯ್ ಗೆ ತಿಳಿದಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಸಂಜಯ್​ ಗೆ ರಾಣಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದಿದ್ದಾಳೆ ಎನ್ನಲಾಗಿದೆ.  ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Lover – fire –kill- questioning –her- about- second love-bangalore