ದೈವನರ್ತಕರಿಗೆ 2 ಸಾವಿರ ರೂ. ಮಾಸಾಶನ ನೀಡಲು ನಿರ್ಧಾರ- ಸಚಿವ ಸುನೀಲ್ ಕುಮಾರ್.

ಬೆಂಗಳೂರು,ಅಕ್ಟೋಬರ್,20,2022(www.justkannada.in): ದೈವನರ್ತಕರಿಗೆ ಜಾನಪದ ಅಕಾಡೆಮಿಯಿಂದ  ಮಾಶಾಸನ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸುನೀಲ್ ಕುಮಾರ್, ದೈವ ನರ್ತನ ಮಾಡುವವರಿಗೆ ಮಾಸಾಶನ ನೀಡಲಾಗುತ್ತದೆ . 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ತಿಂಗಳಿಗೆ 2 ಸಾವಿರ  ರೂ. ಮಾಸಾಶನ ನೀಡಲು ನಿರ್ಧರಿಸಲಾಗಿದೆ ಎಂದರು.

ಕಾಂತಾರ ಸಿನಿಮಾ ಕುರಿತು ನಟ ಚೇತನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುನೀಲ್ ಕುಮಾರ್, ಸಂಸ್ಕೃತಿ ಇಲ್ಲದವರು  ಸಂಸ್ಕೃತಿ ಬಗ್ಗೆ ಮಾತನಾಡಬಾರದು.  ದೈವ ನರ್ತನ ಹಿಂದೂ ಸಂಸ್ಕೃತಿಯ ಭಾಗ.  ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ ಭೂತಾರಾಧನೆ ಎಂಬುದು ಹಿಂದೂ ಸಂಸ್ಕೃತಿಯ ಭಾಗವಾಗಿದೆ. ಯಾರೋ ಒಬ್ಬರು ಹೇಳಿದ್ರೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗಲ್ಲ ಎಂದರು.

Key words: Decision – 2000 Rs – divine dancers- Minister -Sunil Kumar.