ವಿದ್ಯುತ್ ಬೆಂಕಿ ತಗುಲಿ ಕಬ್ಬಿನ ಗದ್ದೆ ನಾಶ: ಅಧಿಕಾರಿಗಳ ವಿರುದ್ಧ ಆಕ್ರೋಶ.

ಮೈಸೂರು,ಮಾರ್ಚ್,4,2022(www.justkannada.in): ವಿದ್ಯುತ್ ಬೆಂಕಿ ತಗುಲಿ ರೈತನ 3 ಎಕರೆ ಕಬ್ಬಿನ ಗದ್ದೆ ನಾಶವಾಗಿರುವ ಘಟನೆ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಕಳ್ಳಿಪುರ ಗ್ರಾಮದಲ್ಲಿ ನಡೆದಿದೆ.

ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮದ ರೈತ ಸಿದ್ದಶೆಟ್ಟಿ ಎಂಬುವರ 3 ಎಕರೆ ಕಬ್ಬಿನ ಗದ್ದೆ ಸಂಪೂರ್ಣ ನಾಶವಾಗಿದೆ. ವಿದ್ಯುತ್  ಟ್ರಾನ್ಸ್ ಫಾರ್ಮರ್ ಕಬ್ಬಿನ ಗದ್ದೆಗೆ ಹೊಂದಿಕೊಂಡಿರುವಂತೆ  ಇದ್ದು, ಕಬ್ಬಿನ ಗದ್ದೆ ಪಕ್ಕದಲ್ಲೇ  ಟ್ರಾನ್ಸ್ ಫಾರ್ಮರ್ ಇಡಲಾಗಿದೆ. ಟ್ರಾನ್ಸ್ ಫಾರ್ಮರ್ ಸುತ್ತ ಸುತ್ತ ಬೆಳೆದಿರುವ ಗಿಡಗೆಂಡೆ ಬೆಳೆದಿದ್ದು  ಈ ಅನಾಹುತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.myosre- Fire -short circuit-burning - cow

ಇನ್ನು ಘಟನೆ ವೇಳೆ ಅದೃಷ್ಟವಶಾತ್ ಕಬ್ಬು ಕಟಾವು ಮಾಡುತ್ತಿದ್ದ 25 ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದು, ಚೆಸ್ಕಾಂಗೆ  ರೈತ ಸಿದ್ದಶೆಟ್ಟಿ ಹಾಗೂ ಕಾರ್ಮಿಕ ಮಹಿಳೆಯರು ಇಡೀ ಶಾಪ ಹಾಕಿದರು.

ಲಕ್ಷಾಂತರ ರೂ ಸಾಲ ಮಾಡಿ ಕಬ್ಬು ಬೆಳೆದಿದ್ದ ರೈತ ಸಿದ್ದಶೆಟ್ಟಿ ಕಬ್ಬು ಬೆಳೆದಿದ್ದರು.  ಫಲ ಕೈಗೆ ಸಿಗುವ ಸಮಯದಲ್ಲಿ ಬೆಂಕಿ ಬಿದ್ದು ಕಬ್ಬು ನಾಶವಾಗಿದ್ದು,  ಸರ್ಕಾರಕ್ಕೆ ಪರಿಹಾರ ನೀಡುವಂತೆ ರೈತ ಸಿದ್ದಶೆಟ್ಟಿ ಮನವಿ ಮಾಡಿದ್ದಾರೆ.

Key words: mysore-fire- Destruction – sugar cane