ಸಚಿವ ಶ್ರೀರಾಮುಲುಗೆ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹ: ಮೈಸೂರಿನಲ್ಲೂ ಭುಗಿಲೆದ್ದ ಆಕ್ರೋಶ…

ಮೈಸೂರು,ಆ,28,2019(www.justkannada.in): ಸಚಿವ ಶ್ರೀರಾಮುಲುಗೆ ಡಿಸಿಎಂ ಹುದ್ದೆ ಕೈ ತಪ್ಪಿದ್ದಕ್ಕೆ ಮೈಸೂರಿನಲ್ಲೂ ಆಕ್ರೋಶ ಭುಗಿಲೆದ್ದಿದೆ. ತಮ್ಮ ನಾಯಕನಿಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ವಾಲ್ಮಿಕಿ ಸಮುದಾಯ ಪ್ರತಿಭಟನೆ ನಡೆಸಿದೆ.

ಮೈಸೂರಿನಲ್ಲಿ ವಾಲ್ಮೀಕಿ ಸಮುದಾಯ ಸಚಿವ ಶ್ರೀರಾಮುಲು ಪರ ಬ್ಯಾಟಿಂಗ್ ಮಾಡಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿದ  ವಾಲ್ಮಿಕಿ ಸಮುದಾಯದ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಷ್ಟ್ರಿಯ ಸಂಘಟನಾ ಕಾರ್ಯದರ್ಶಿ ಸಂತೋಷ್ ವಿರುದ್ಧ ಧಿಕ್ಕಾರ‌ ಕೂಗಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಹೈಕಮಾಂಡ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಶ್ರೀರಾಮುಲು ಹಾಗೂ  ರಾಜುಗೌಡರ ಭಾವಚಿತ್ರ ಹಿಡಿದು, ಬೇಕೆ ಬೇಕೆ ಡಿಸಿಎಂ ಬೇಕು ಎಂದು ಘೋಷಣೆ ಕೂಗಿ  ಆಕ್ರೋಶ ಹೊರ ಹಾಕಿದರು.

Key words: DCM – post -Minister- Sriramulu-protest-mysore