ಗ್ರಾಪಂ ಚುನಾವಣೆಯಲ್ಲು ‘ನೋಟಾ’ ಅಧಿಕಾರ ನೀಡುವಂತೆ ಒತ್ತಾಯ 

ದಾವಣಗೆರೆ,ಡಿಸೆಂಬರ್,11,2020(www.justkannada.in) : ಗ್ರಾಮ ಪಂಚಾಯಿತಿಗೆ ಚುನಾವಣೆಯಲ್ಲಿಯೂ ಬೇರೆ ಚುನಾವಣೆಗಳಿಗೆ ಇರುವಂತೆ ‘ನೋಟಾ’ (ನನ್‌ ಆಫ್‌ ದಿ ಎಬವ್‌) ಇರಬೇಕು ಎಂಬ ಕೂಗು ಕೇಳಿ ಬಂದಿದೆ.logo-justkannada-mysoreಹಣದ ಬಲ ಅಥವಾ ಇನ್ಯಾವುದೋ ಬಲದ ಕಾರಣದಿಂದ ಭ್ರಷ್ಟರು, ವೈಯಕ್ತಿಕ ಅಭಿವೃದ್ಧಿ ಮಾಡಿಕೊಳ್ಳುವವರು ಚುನಾವಣೆಗೆ ನಿಂತಿದ್ದರೆ ಅವರನ್ನು ತಿರಸ್ಕರಿಸುವ ಅಧಿಕಾರ ನೀಡಬೇಕು ಎಂದು ಗ್ರಾಮೀಣ ರಾಜಕೀಯ ಚಿಂತಕ ತೇಜಸ್ವಿ ಪಟೇಲ್ ಒತ್ತಾಯಿಸಿದ್ದಾರೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಎಂಬ ವಿಕೇಂದ್ರೀಕರಣದ ಮೂರು ಸ್ತರದ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಯೇ ಬಲಿಷ್ಠವಾದುದು. ಎಲ್ಲ ಸರ್ಕಾರಿ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆ ನಡೆಯುವುದೇ ಗ್ರಾಮಸಭೆಗಳಲ್ಲಿ. ಇಂಥ ಅಧಿಕಾರ ಜಿಲ್ಲಾ ಪಂಚಾಯಿತಿಗಾಗಲಿ, ತಾಲ್ಲೂಕು ಪಂಚಾಯಿತಿಗಾಗಲಿ ಇಲ್ಲ. ಶಾಸಕರ ನಂತರ ಇಂಥ ಅವಕಾಶವನ್ನು ಹೊಂದಿರುವ ಗ್ರಾಮ ಪಂಚಾಯಿತಿಗೆ ಪ್ರಾಮಾಣಿಕರು, ಅಭಿವೃದ್ಧಿ ಬಗ್ಗೆ ಬದ್ಧತೆ ಇರುವವರು ಆಯ್ಕೆಯಾಗಬೇಕು ಎಂಬ ಆಶಯವ್ಯಕ್ತಪಡಿಸಿದ್ದಾರೆ.

ಒಂದು ವಾರ್ಡ್‌ನಲ್ಲಿ ಮೂರು-ನಾಲ್ಕು ಜನರನ್ನು ಆಯ್ಕೆ ಮಾಡಬೇಕಾದ ಸನ್ನಿವೇಶಗಳು ಕೂಡಾ ಇರುವಾಗ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕೂಡ ಕೆಲವರು ಕೇಳಿದ್ದಾರೆ. ಈಗ ನಾಲ್ಕು ಮಂದಿಯಲ್ಲಿ ಒಬ್ಬರಿಗೆ ಮತ ಹಾಕಿ ಮೂವರಿಗೆ ಹಾಕಲು ಮನಸ್ಸು ಇಲ್ಲದೇ ಇದ್ದರೆ ಅದನ್ನು ದಾಖಲು ಮಾಡುವ ವ್ಯವಸ್ಥೆ ಇರಬೇಕು. ನನ್‌ ಆಫ್‌ ದಿ ಎಬವ್‌ (ನೋಟಾ) ಎಂಬ ಹೆಸರು ಬೇಡದೇ ಇದ್ದರೆ ಬೇರೆ ಹೆಸರು ಬೇಕಿದ್ದರೆ ಇಡಲಿ ಎಂದು ಆಗ್ರಹಿಸಿದ್ದಾರೆ.

Gram-Panchayat-elections-Nota-Authority-giving-Insist

ಚುನಾವಣಾ ಆಯೋಗದ ನಿರ್ದೇಶನದಂತೆ ನಾವು ಕೆಲಸ ಮಾಡುತ್ತೇವೆ. ಗ್ರಾಮ ಪಂಚಾಯಿತಿಗೆ ‘ನೋಟಾ’ ಅವಕಾಶ ಇಲ್ಲ. ಬದಲಾವಣೆ ಆಯೋಗ ಮಾಡಬೇಕೇ ಹೊರತು ನಮ್ಮ ಹಂತದಲ್ಲಿ ಆಗುವುದಿಲ್ಲ ಎಂದು ಬೀಳಗಿ ಜಿಲ್ಲಾ ಚುನಾವಣಾಧಿಕಾರಿ ಮಹಾಂತೇಶ ತಿಳಿಸಿದ್ದಾರೆ.

key words : Gram-Panchayat-elections-Nota-Authority-giving-
Insist