85ನೇ ವರ್ಷ ವಯಸ್ಸಿನಲ್ಲಿ ಕ್ರಿಕೆಟ್’ಗೆ ವಿದಾಯ ಘೋಷಿಸಿದ ವಿಂಡೀಸ್ ಕ್ರಿಕೆಟಿಗ

ದುಬೈ, ಆಗಸ್ಟ್ 28, 2019 (www.justkannada.in): ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಸಿಸಿಲ್ ರೈಟ್ ತಮ್ಮ 85ನೇ ವರ್ಷ ವಯಸ್ಸಿನಲ್ಲಿ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ.

ಇದರೊಂದಿಗೆ ತಮ್ಮ 60 ವರ್ಷಗಳ ಸುದೀರ್ಘ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಲಿದ್ದಾರೆ. ಇಷ್ಟು ದೀರ್ಘವಾದ ಸಮಯದಲ್ಲಿ ನಿವೃತ್ತಿ ಘೋಷಿಸಿದ ದಾಖಲೆ ಮಾಡಿದ್ದಾರೆ.

ಆಪ್ತ ವಲಯದಲ್ಲಿ ‘ಸಿಸ್’ ಎಂದು ಕರೆಸಿಕೊಳ್ಳುವ ರೈಟ್ ಅವರು 60ರ ದಶಕದಲ್ಲಿ ಜಮೈಕಾ ಪರವಾಗಿ ಆಡಿದ್ದರು. ಸೋಬರ್ಸ್ ಮತ್ತು ವೆಸ್ ಹಾಲ್ ಅವರು ಇದ್ದ ಬಾರ್ಬಡೊಸ್ ವಿರುದ್ಧದ ಪಂದ್ಯದಲ್ಲಿ ಆಡಿದ್ದರು.